ಬಿಜೆಪಿ ಮಂಡಲದ ಮಾಸಿಕ ಸಭೆ: "ಬಿಎಸ್ ವೈ ಅಭಿಮಾನೋತ್ಸವ" ಆಮಂತ್ರಣ ಪತ್ರಿಕೆ ಬಿಡುಗಡೆ
Thursday, May 7, 2026
ಮೂಡುಬಿದಿರೆ: ಭಾರತೀಯ ಜನತಾ ಪಾಟಿ೯ ಮುಲ್ಕಿ-ಮೂಡುಬಿದಿರೆ ಮಂಡಲದ ಮಾಸಿಕ ಸಭೆಯು ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ವಿದ್ಯಾಗಿರಿಯಲ್ಲಿರುವ ಪಕ್ಷದ ಕಛೇರಿಯಲ್ಲಿ ಬುಧವಾರ ನಡೆಯಿತು.
ಜನ ಸೇವೆಯಲ್ಲಿ ಸಾಥ೯ಕ 50 ವಷ೯ಗಳನ್ನು ಪೂರೈಸಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡ್ಯೂರಪ್ಪ ಅವರ "ಅಭಿಮಾನೋತ್ಸವ"ದ ಆಮಂತ್ರಣ ಪತ್ರಿಕೆಯನ್ನು ಈ ಸಂದಭ೯ದಲ್ಲಿ ಬಿಡುಗಡೆಗೊಳಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಸುನಿಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಜಿಲ್ಲಾ ಕಾಯ೯ದಶಿ೯ ಶುಭೇಂದ್ರ ಸಸಿಹಿತ್ಲು, ಮಂಡಲ ಪ್ರಭಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲದ ಪ್ರಧಾನ ಕಾಯ೯ದಶಿ೯ ರಂಜಿತ್ ಪೂಜಾರಿ, ಕಾಯ೯ದಶಿ೯ ಹರಿಪ್ರಸಾದ್, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ಕಾಯ೯ದಶಿ೯ ಭರತ್ ಶೆಟ್ಟಿ, ಪ್ರಮುಖರಾದ ಜಯಂತ ಹೆಗ್ಡೆ, ಮುನಿರಾಜ್ ಹೆಗ್ಡೆ, ಸೋಮನಾಥ ಕೋಟ್ಯಾನ್, ಶಶಿಕಿರಣ್, ಅಭಿಲಾಷ್ ಕಟೀಲು ಮತ್ತಿತರರು ಈ ಸಂದಭ೯ದಲ್ಲಿದ್ದರು.
