ಬನ್ನಡ್ಕ: ರಾ. ಹೆದ್ದಾರಿಯಲ್ಲಿ ಕಾರು-ಪಿಕ್ ಅಪ್ ಢಿಕ್ಕಿ: ಜಖಂ

ಬನ್ನಡ್ಕ: ರಾ. ಹೆದ್ದಾರಿಯಲ್ಲಿ ಕಾರು-ಪಿಕ್ ಅಪ್ ಢಿಕ್ಕಿ: ಜಖಂ


ಮೂಡುಬಿದಿರೆ: ರಾ.ಹೆ 168ರ ಬನ್ನಡ್ಕ ಕೆಸರ್ ಗದ್ದೆಯಲ್ಲಿ ಸೋಮವಾರ ಸಂಜೆ ಕಾರು ಮತ್ತು ಪಿಕ್ ಅಪ್ ವಾಹನದ ಮಧ್ಯೆ ಢಿಕ್ಕಿ ಸಂಭವಿಸಿದೆ.

ಪಿಕ್ ಅಪ್ ಚಾಲಕ ವಾಹನವನ್ನು ಸವೀ೯ಸ್ ರಸ್ತೆಯಿಂದ  ಹೆದ್ದಾರಿಗೆ ಪ್ರವೇಶಿಸಿಲು ಪ್ರಯತ್ನಿಸುತ್ತಿದ್ದಾಗ ಹೈವೇಯಲ್ಲಿ  ಬಂದ ಕಾರು ಪಿಕ್ ಅಪ್ ಗೆ ಡಿಕ್ಕಿ ಹೊಡೆದಿದೆ. 


ಅಪಘಾತದ ತೀವೃತೆಗೆ ಎರಡೂ ವಾಹನಗಳು ಜಖಂಗೊಂಡಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 

 ಇನ್ನೆಷ್ಟು ಬಲಿಗೆ ಕಾಯುತ್ತಿದೆ ಹೆದ್ದಾರಿ...?

ರಾ. ಹೆದ್ದಾರಿಯ ಕಾಮಗಾರಿ ಆರಂಭವಾದಾಗಿನಿಂದ ಈಗಾಗಲೇ ಸುಮಾರು ವಾಹನ ಅಪಘಾತಗಳು ನಡೆದು ಪ್ರಾಣ ಕಳೆದುಕೊಂಡಿದ್ದಾರೆ.

 ಅಪಘಾತಕ್ಕೆ ರಾ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಕಾರಣವೋ..? ವಾಹನ ಸವಾರರ ಅತಿವೇಗದ ಚಾಲನೆ ಕಾರಣವೋ ಅಥವಾ ಸಾವ೯ಜನಿಕರು ಹೇಳುವಂತೆ ಬನ್ನಡ್ಕದಲ್ಲಿ ಮಣ್ಣಿನಡಿಗೆ ಬಿದ್ದಿರುವ ದೈವದ ಕಲ್ಲಿನ ಕೋಪ ಕಾರಣವೋ ಎಂದು ಗೊತ್ತಾಗುತ್ತಿಲ್ಲ.. ಅದೇನೆ ಇರಲಿ ಆದರೆ  ಅಪಘಾತಗಳಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಮಾತ್ರ ಬಡ ಜೀವಗಳು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article