ಬನ್ನಡ್ಕ: ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ: ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯ

ಬನ್ನಡ್ಕ: ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ: ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯ


ಮೂಡುಬಿದಿರೆ: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ವಿಶಾಲ್ ಎಂಬ ಹೆಸರಿನ ಖಾಸಗಿ ಬಸ್ಸೊಂದು ಶನಿವಾರ ಸಂಜೆ ಬನ್ನಡ್ಕ ಸೋನ್ಸ್ ಫಾರ್ಮ್ ನ ಅಮನೊಟ್ಟು ಕ್ರಾಸ್ ಮುಂಭಾಗದಲ್ಲಿ ಪಲ್ಟಿಯಾಗಿ ದ್ವಿಚಕ್ರ ವಾಹನ ಸವಾರರು ಸಹಿತ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕಾಕ೯ಳದಿಂದ ಮೂಡುಬಿದಿರೆ ಕಡೆಯಿಂದ ಕಾಕ೯ಳ ಕಡೆಗೆ ತೆರಳುತ್ತಿದ್ದ ಬಸ್, ಬಸ್ಸಿನ ಮುಂದುಗಡೆ ತೆರಳುತ್ತಿದ್ದ ಕಾರು ಬನ್ನಡ್ಕ ಬಳಿ ಹಿಂದುಗಡೆ ಬರುತ್ತಿದ್ದ ಬಸ್ಸನ್ನು ಗಮನಿಸದೆ ಯು-ಟನ್೯ ತೆಗೆದುಕೊಂಡಿದೆ. ಈ ಸಂದಭ೯ದಲ್ಲಿ ಅಪಾಯವನ್ನು ತಪ್ಪಿಸಲು ಪ್ರಯತ್ನಿಸಿರುವ ಬಸ್ ಚಾಲಕ ಎದುರಿನಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಒಟ್ಟು 16 ಮಂದಿಗೆ ಗಾಯಗಳಾಗಿದ್ದು ಅದರಲ್ಲಿ  ದ್ವಿಚಕ್ರ ವಾಹನದ  ಸವಾರರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 


ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಬನ್ನಡ್ಕ ಪರಿಸರದಲ್ಲಿ ಈಗಾಗಲೇ ಹಲವು ಅಪಘಾತ ಗಳು ಸಂಭವಿಸಿದ್ದು ಪ್ರಾಣ ಹಾನಿಗಳಾಗಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article