ಗಾಳಿ ಮಳೆ: ನಿಡ್ಡೋಡಿಯಲ್ಲಿ ಧರೆಗುರುಳಿದ ಮರ, ವಿದ್ಯುತ್ ಕಂಬಗಳು-ಸಂಚಾರ ಸ್ಥಗಿತ, ವಿದ್ಯುತ್ ವ್ಯತ್ಯಯ

ಗಾಳಿ ಮಳೆ: ನಿಡ್ಡೋಡಿಯಲ್ಲಿ ಧರೆಗುರುಳಿದ ಮರ, ವಿದ್ಯುತ್ ಕಂಬಗಳು-ಸಂಚಾರ ಸ್ಥಗಿತ, ವಿದ್ಯುತ್ ವ್ಯತ್ಯಯ


ಮೂಡುಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ದಡ್ಡು ಪೆಟ್ರೋಲ್ ಬಂಕ್ ಸಮೀಪ ಶುಕ್ರವಾರ ಸಾಯಂಕಾಲ ಬೃಹತ್ ಗಾತ್ರದ ಗಣಪತಿಕಾಯಿ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.

ಮರ ಬೀಳುವ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ರಾಜ್ಯ ಹೆದ್ದಾರಿ 67ಕ್ಕೆ ಹತ್ತಿರವಿರುವ ಈ ಭಾಗದಲ್ಲಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಶನಿವಾರ ಬೆಳಗ್ಗಿನವರೆಗೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿರುವುದರಿಂದ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article