ಮೂಡುಬಿದಿರೆ ದೇವಾಡಿಗ ಸುಧಾರಕ ಸಂಘದ ಅಮೃತ ಮಹೋತ್ಸವ-ಸಮುದಾಯ ಭವನ ಉದ್ಘಾಟನೆ
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮುದಾಯ ಭವನ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕೇಸರ ಅನಂತ ಪದ್ಮನಾಭ ಆಸ್ರಣ್ಣ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಶ್ರೀಪತಿ ಭಟ್, ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಮುಂಬೈ ದೇವಾಡಿಗ ಸಂಘದ ರವಿ ದೇವಾಡಿಗ, ಉದ್ಯಮಿ ಸುರೇಂದ್ರ ಕುಮಾರ್ ಹೆಗ್ಡೆ, ಎಚ್.ಮೋಹನ್‌ದಾಸ್, ಬಿಜೆಪಿ ದ.ಕ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪ್ರಕಾಶ್ ಶೆಟ್ಟಿ, ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯಿಲಿ, ಎಸ್‌ಸಿಎಸ್ ಬ್ಯಾಂಕ್ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಕಡಂದಲೆ ಪರಾರಿಯ ಕೆ. ಪಿ. ಸಂತೋಷ್ ಕುಮಾರ್ ಶೆಟ್ಟಿ, ಬೆಂಗಳೂರು ದೇವಾಡಿಗರ ಸಂಘದ ಅಧ್ಯಕ್ಷ ರಮೇಶ್ ವಂಡೈ, ಎಲ್‌ಐಸಿ ಮುಖ್ಯ ಸಲಹೆಗಾರ ಎಂ. ಚಂದ್ರಹಾಸ ದೇವಾಡಿಗ, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ಮುಖ್ಯ ಅತಿಥಿಗಳಾಗಿದ್ದರು.
ದೇವಾಡಿಗರ ಸಂಘ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರಂದರ ದೇವಾಡಿಗ, ಸಮಿತಿಯ ಗೌರವಾಧ್ಯಕ್ಷ ರತ್ನಾಕರ ಸಿ.ಮೊಯಿಲಿ, ಕಾರ್ಯಾಧ್ಯಕ್ಷರಾದ ವಿಶ್ವನಾಥ ಪಿ.ದೇವಾಡಿಗ, ಶಶಿಧರ್ ಎಸ್.ದೇವಾಡಿಗ, ಪ್ರಧಾನ ಕಾರ್ಯದರ್ಶಿ ರಮೇಶ್ ದೇವಾಡಿಗ, ದೇವಗಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಕ್ಕಿನೊಟ್ಟು, ಕೋಶಾಧಿಕಾರಿ ಯಶೋಧರ ದೇವಾಡಿಗ, ಮಹಿಳಾ ವೇದಿಕೆಯ ಅಧ್ಯಕ್ಷೆ ಲಲಿತಾ ಸಂಜೀವ ಮೊಯಿಲಿ, ಯುವ ವೇದಿಕೆಯ ಅಧ್ಯಕ್ಷ ಪ್ರೇಮ್ ಶಂಕರ್ ಸಹಿತ ವಿವಿಧ ಸಮಿತಿ ಪದಾಧಿಕಾರಿಗಳು ಉಉಪಸ್ಥಿತರಿದ್ದರು.
ಸತೀಶ್ ಬೆಟ್ಕೇರಿ, ಕರುಣಾಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರಮಾ ಪದ್ಮನಾಭ ವಂದಿಸಿದರು.