ಗಾಳಿ-ಮಳೆ: ಮೂಡುಬಿದಿರೆಯ ತಾಕೊಡೆ ಪೋಸ್ಟ್ ಆಫೀಸಿಗೆ ಹಾನಿ
Tuesday, May 12, 2026
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ತಾಕೊಡೆ ವ್ಯಾಪ್ತಿಯಲ್ಲಿ ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ತಾಕೊಡೆ ಅಂಚೆಕಚೇರಿಯ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿ ಹಾನಿ ಸಂಭವಿಸಿದೆ.
ಅನಿರೀಕ್ಷಿತ ಗಾಳಿಯ ವೇಗಕ್ಕೆ ಹೆಂಚುಗಳು ಉರುಳಿ ಬಿದ್ದ ಪರಿಣಾಮ ಕಚೇರಿಯೊಳಗೆ ಮಳೆ ನೀರು ನುಗ್ಗಿದೆ. ಮಧ್ಯಾಹ್ನದ ಬಳಿಕ ರಜೆ ಇದ್ದ ಕಾರಣ ಕಚೇರಿಯು ಮುಚ್ಚಲ್ಪಟ್ಟಿತ್ತು, ಇದರಿಂದಾಗಿ ಅನಾಹುತ ತಪ್ಪಿದೆ. ಕಚೇರಿಯಲ್ಲಿದ್ದ ದಾಖಲೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೋಸ್ಟ್ ಮಾಸ್ಟರ್ ಶಿವಾನಂದ್ ತಿಳಿಸಿದ್ದಾರೆ.
