ಜಮೀಯತುಲ್ ಫಲಾಹ್ ವತಿಯಿಂದ 'ಸಮನ್ವಯ' ಕಾರ್ಯಕ್ರಮ
ಜಮೀಯತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲೆಯ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಅವರು ಅಧ್ಯಕ್ಷತೆ ವಹಿಸಿದ್ದರು.
ಜಮೀಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಶೇಖ್ ನೂರುದ್ದೀನ್ ಅವರು ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ಜಮೀಯತುಲ್ ಫಲಾಹ್ ವತಿಯಿಂದ ನಡೆಯುತ್ತಿರುವ ವಿವಿಧ ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಯೋಜನೆಗಳ ಕುರಿತು ವಿವರಿಸಲಾಯಿತು.
ಬೆಳುವಾಯಿ-ಚಿಲಿಂಬಿ ಬಳಿಯ ಗ್ರೀನ್ ವ್ಯೂ ಕಾನೂನು ಕಾಲೇಜು ಯೋಜನೆ,ಮಂಗಳೂರಿನ ಮಹಿಳಾ ಹಾಸ್ಟೆಲ್ ಯೋಜನೆ, ಉಡುಪಿಯ ವಿದ್ಯಾರ್ಥಿ ಹಾಸ್ಟೆಲ್ ಯೋಜನೆ, ಅಡ್ಕರೆಪಡ್ಪುವಿನ ಗ್ರೀನ್ ವ್ಯೂ ಶಾಲೆಯ ವಿಸ್ತರಣಾ ಯೋಜನೆ ಹಾಗೂ ಐಟಿ ಇಂಟೆಗ್ರೇಷನ್ ಯೋಜನೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಹತ್ತು ಮಂದಿ ಯುವಕರು ಜಮೀಯತುಲ್ ಫಲಾಹ್ ನ ಅಜೀವ ಸದಸ್ಯರಾಗಿ ಸೇರ್ಪಡೆಗೊಂಡರು.
ಜಮೀಯತುಲ್ ಫಲಾಹ್ ನ ಹಿರಿಯ ಸದಸ್ಯರಾದ ಎಂ.ಎಚ್.ಇಕ್ಬಾಲ್ ಬಂಟ್ವಾಳ ಅವರನ್ನು ಖಜಾಂಚಿ ಎಸ್.ಎ.ಗಫೂರ್ ಅವರು ಸನ್ಮಾನಿಸಿದರು.
ಅಶ್ಫಾಕ್ ಅಹ್ಮದ್, ಕೆ.ಕೆ.ಶಾಹುಲ್ ಹಮೀದ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಅಶ್ರಫ್ ಮರೋಡಿ ಸ್ವಾಗತಿಸಿ ಮಾಜಿ ಅಧ್ಯಕ್ಷರಾದ ಅಬ್ದುಲ್ ರವೂಫ್ ಅವರು ವಂದಿಸಿದರು.