ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಗ್ಗಿ ವಾಹನದ ಸೇವೆ
Friday, May 8, 2026
ಉಜಿರೆ: ಇನ್ನು ಮುಂದೆ ವಯೋವೃದ್ಧರಿಗೆ ಮತ್ತು ಅಶಕ್ತರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೊರ ಆವರಣದೊಳಗೆ ಸಂಚರಿಸಲು ಬಗ್ಗಿ ವಾಹನದ ಸೇವೆ ಲಭ್ಯವಿರಲಿದೆ.
ಪರಿಸರ ಸ್ನೇಹಿ ಮತ್ತು ಶಬ್ದ ರಹಿತ ವಾಹನ ಇದಾಗಿದ್ದು, ನಡೆಯಲು ಕಷ್ಟ ಪಡುವವರಿಗೆ ಆಸ್ಪತ್ರೆಯ ಹೊರ ಆವರಣದಲ್ಲಿ ಸಂಚರಿಸಲು ಇದು ಬಹು ಉಪಯುಕ್ತವಾಗಿದೆ. 4.65 ಲಕ್ಷ ಮೌಲ್ಯದ ಈ ವಾಹನವನ್ನು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನವರು ಉಚಿತವಾಗಿ ನೀಡಿದ್ದು, ಬ್ಯಾಂಕ್ ಆಫ್ ಬರೋಡಾ ಇದರ ಪ್ರಾದೇಶಿಕ ಮೇನೇಜರ್ ಗಣೇಶ್ ಉಜಿನ ಮತ್ತು ಜನರಲ್ ಮೆನೇಜರ್ ರಾಜೇಶ್ ಖನ್ನಾ ಅವರು ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಬಗ್ಗಿ ವಾಹನದ ಕೀಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ, ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಉಜಿರೆ ಶಾಖೆಯ ಮೇನೇಜರ್ ಶಿವರಾಮ ಹಾಗೂ ಧರ್ಮಸ್ಥಳ ಶಾಖೆಯ ಮೆನೇಜರ್ ಚೈತನ್ಯಾನಂದ ಎನ್. ಉಪಸ್ಥಿತರಿದ್ದರು.