ಬೀಸಿದ ಭಾರಿ ಗಾಳಿಮಳೆಗೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿ: ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕೆ
Wednesday, May 13, 2026
ಮೂಡುಬಿದಿರೆ: ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿಯಾಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಪಡುಮಾರ್ನಾಡು ಜಿ.ಕೆ ಗಾರ್ಡನ್ ಬಳಿಯಿಂದ ಅಲಂಗಾರು ಒಂಡಿತ್ ರೆಸಾರ್ಟ್ ವರೆಗಿನ ರಸ್ತೆಯಲ್ಲಿ ನಾಲ್ಕಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದೇ ಪರಿಸರದಲ್ಲಿ ಹಲವು ಮರಗಳು ಬಿದ್ದಿದ್ದು ಸಂಚಾರ ಹಾಗೂ ವಿದ್ಯುತ್ ಸಂಪರ್ಕಕ್ಕೆ ವ್ಯತ್ಯಯ ಉಂಟಾಗಿದೆ. ಪಡುಮಾರ್ನಾಡು ಕೋಡಿಗುಂಡದ ಸುಲೋಚನ ಹೆಗ್ಡೆ, ಮುನ್ನೇರು ದಿನೇಶ್ ಶೆಟ್ಟಿ ಹಾಗೂ ಬಂಗೊಟ್ಟು ವಿಜಯ ಹೆಗ್ಡೆ ಎಂಬುವವರ ಮನೆಗಳ ಶೀಟುಗಳು ಹಾರಿಹೋಗಿ ಹಾನಿಯಾಗಿದೆ.

