ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ


ಮೂಡುಬಿದಿರೆ: ಪಡುಮಾನಾ೯ಡು ಗ್ರಾ. ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಡುಮಾನಾ೯ಡು ಇವುಗಳ ಜಂಟಿ ಆಶ್ರಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಮಂಗಳವಾರ ಅಚ್ಚರಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ಆರಂಭಗೊಂಡಿತು. 


ಐದು ದಿನಗಳ ಕಾಲ ನಡೆಯುವ ಶಿಬಿರಕ್ಕೆ ಪಡುಮಾನಾ೯ಡು ಗ್ರಾ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಚಾಲನೆ ನೀಡಿ ಶುಭ ಹಾರೈಸಿದರು. 


ಅಚ್ಚರ ಕಟ್ಟೆ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕಿ ಇಂದು ಗ್ರಾಮೀಣ ಮಕ್ಕಳ ಸಂಜೀವಿನಿ ಒಕ್ಕೂಟದ ನಾಗಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಪ್ರೆಸ್ ಕ್ಲಬ್ ಕಾಯ೯ದಶಿ೯ ಪ್ರೇಮಶ್ರೀ ಕಲ್ಲಬೆಟ್ಟು ಅತಿಥಿಯಾಗಿ ಭಾಗವಹಿಸಿದ್ದರು. 


ವಿದ್ಯಾಥಿ೯ನಿ ಹಷಾ೯ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವೀಚಾರಕಿ ವನಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು.  

 ಪಂಚಾಯತ್ ಸಿಬಂದಿ ರಾಜು ಕಾಯ೯ಕ್ರಮ ನಿರೂಪಿಸಿದರು. ಕೃತಿಕಾ ವಂದಿಸಿದರು.

ಬೇಸಿಗೆ ಶಿಬಿರದಲ್ಲಿ 34 ಮಕ್ಕಳು ಪಾಲ್ಗೊಂಡಿದ್ದು, ಮಕ್ಕಳಿಗೆ  ಯೋಗ,  ಪಾಸಿಂಗ್ ದ ಬಾಲ್, ಶಟಲ್ ಬ್ಯಾಟ್,  ನೃತ್ಯ, ಸಂಗೀತ, ಐಕ್ಯೂ ಟೆಸ್ಟ್ ಬ್ರೈನ್  ಟೆಸ್ಟ್. ಹುಲಿ ದನ ಆಟ ಆಡಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article