6 ಕಡೆಯಲ್ಲಿ ಕುಡಿಯುವ ನೀರಿಗೆ ತತ್ವಾರ-ಕೊಳವೆಬಾವಿ ವ್ಯವಸ್ಥೆ
ಪುತ್ತೂರು: ವರುಣನ ಅವಕೃಪೆ ಹಾಗೂ ಬಿಸಿಲ ಧಗೆಗೆ ಕುಡಿಯುವ ನೀರಿಗೆ ಕೆಲ ಭಾಗಗಳಲ್ಲಿ ತತ್ವಾರ ಉಂಟಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ 6 ಹೊಸ ಕೊಳವೆ ಬಾವಿ ಹಾಗೂ ಒಂದು ಕಡೆಯಲ್ಲಿ ಕೊಳವೆ ಬಾವಿ ಫ್ಲಶ್ಸಿಂಗ್ ಮಾಡಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಆರ್ಯಾಪು ಗ್ರಾಮದ ಕಲ್ಲರ್ಪೆ, ಹಾಗೂ ಸಂಪ್ಯದಲ್ಲಿ ಫ್ಲಶ್ಸಿಂಗ್, ಬಡಗನ್ನೂರು ಗ್ರಾಮದ ಕುಕ್ಕಾಜೆ, ನರಿಮೊಗರು ಗ್ರಾಮದ ಮಾಯಂಗಳ, ನೆಕ್ಕಿಲಾಡಿ ಗ್ರಾಮದ ಬೊಳಂತಿ, ಒಳಮೊಗ್ರು ಗ್ರಾಮದ ಪರ್ಪುಂಜ, ನೆಟ್ಟಣಿಗೆ ಮುಡ್ನೂರು ಗ್ರಾಮದ ಸುರುಳಿಮೂಲೆ ಯಲ್ಲಿ ಹೊಸ ಕೊಳವೆ ಬಾವಿಯನ್ನು ತೆಗೆಯಲಾಗಿದೆ. ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಕೂಡ ಲಭ್ಯವಾಗಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಆರು ಆರು ಕಡೆಗಳಲ್ಲಿ ಹೊಸ ಕೊಳವೆಬಾವಿ ಹಾಗೂ ಒಂದು ಕಡೆ ಕೊಳವೆ ಬಾವಿಗೆ ಫ್ಲಶ್ಸಿಂಗ್ ಮಾಡುವ ಮೂಲಕ ನೀರಿನ ಸಮಸ್ಯೆಗೆ ಸ್ಪಂದಿಲಾಗಿದೆ. ನೀರು ಮೂಲಭೂತ ವ್ಯವಸ್ಥೆಯಾಗಿರುವ ನೀರು ಇಲ್ಲವಾದರೆ ಏನೂ ಮಾಡಲು ಸಾಧ್ಯವಿಲ್ಲ, ಈ ಕಾರಣಕ್ಕೆ ಗ್ರಾಮಸ್ಥರ ಬೇಡಿಕೆಯಂತೆ ತಕ್ಷಣ ಸ್ಪಂದಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಬೇರೆ ಕಡೆಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದಿಲ್ಲ ಮತ್ತು ಎಲ್ಲಿಯಾದರೂ ಕುಡಿಯುವ ನೀರಿಗೆ ಸಮಸ್ಯೆಯಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಗ್ರಾಪಂಗಳಿಗೆ ಸೂಚನೆಯನ್ನು ನೀಡಲಾಗಿದೆ. ನೀರಿನ ಸಮಸ್ಯೆಯಾದಲ್ಲಿ ಶಾಸಕರ ಕಚೇರಿಗೆ ಮಾಹಿತಿ ನೀಡುವಂತೆ ಶಾಸಕ ಅಶೋಕ್ ರೈ ಅವರು ಜನತೆಗೆ ಮನವಿ ಮಾಡಿದ್ದಾರೆ.