ಫಾರ್ಮಾಸಿಟಿಕಲ್ ಕೆಮಿಸ್ಟ್ರಿ ಸರ್ಟಿಫಿಕೇಟ್ ಕೋರ್ಸ್‌ನ ಸಮಾರೋಪ
Friday, May 29, 2026
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ರಸಾಯನಶಾಸ್ತ್ರ ವಿಭಾಗವು ಸೋಮವಾರ ಆಯೋಜಿಸಿದ ಫಾರ್ಮಾಸಿಟಿಕಲ್ ಕೆಮಿಸ್ಟ್ರಿ ಕೋರ್ಸ್‌ನ ಸಮಾರೋಪ ಕಾರ್ಯಕ್ರಮ ನಡೆಯಿತು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಉದ್ಯಮೋನ್ಮುಖ ಶಿಕ್ಷಣ ಮತ್ತು ಪ್ರಾಯೋಗಿಕ ಅನುಭವದ ಮಹತ್ವವನ್ನು ತಿಳಿಸಿದರು.
ಜೆನಿಷಾ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕೋರ್ಸ್‌ನ ಸಂಯೋಜಕ ಡಾ. ಎಡ್ವಿನ್ ಎಸ್. ಡಿ’ಸೋಜ ಸ್ವಾಗತಿಸಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಾಲಿನಿ ಕೆ. ವಂದಿಸಿದರು. ಅಪರ್ಣಾ ಮತ್ತು ತಂಡ ಪ್ರಾರ್ಥಸಿ, ವಿದ್ಯಾರ್ಥಿನಿ ಶ್ರೀವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

