ಪೃಥ್ವಿಶ್ರೀ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆ

ಪೃಥ್ವಿಶ್ರೀ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆ


ಪುತ್ತೂರು: ಪುತ್ತೂರಿನ ನೃತ್ಯೋಪಾನಾ ಕಲಾ ಅಕಾಡೆಮಿಯ ವಿದ್ಯಾರ್ಥಿನಿ ಪೃಥ್ವಿಶ್ರೀ ಕೆ. ಅವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ದೂರದರ್ಶನ ಕೇಂದ್ರ 2025 ನವೆಂಬರ್ನಲ್ಲಿ ನಡೆಸಿದ ಭರತನಾಟ್ಯ ವಿಭಾಗದ ಆಡಿಷನ್‌ಗೆ ಹಾಜರಾದ ಪೃಥ್ವಿಶ್ರೀ ಅವರು ‘ಬಿ’ ಗ್ರೇಡ್ ಪಡೆದುಕೊಂಡಿದ್ದಾರೆ.

ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರಲ್ಲಿ ಕಳೆದ 14 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈಕೆ ಈ ವರ್ಷ ವಿದ್ವತ್

ಅಂತಿಮ ಪರೀಕ್ಷೆ ಬರೆದಿರುತ್ತಾರೆ. ಪೃಥ್ವಿಶ್ರೀ ಅವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಎಂ.ಕಾಂ ಕಲಿಯುತ್ತಿದ್ದಾರೆ. ನೃತ್ಯೋಪಾಸನಾ ಕಲಾ ಅಕಾಡೆಮಿಯ ತಂಡದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಲಕ್ಷದೀಪೋತ್ಸವ, ಹಂಪಿ ಉತ್ಸವ, ಬನವಾಸಿ ಕದಂಬೋತ್ಸವ, ಮೈಸೂರು ದಸರಾ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ, ಮಂತ್ರಾಲಯ ಮಹೋತ್ಸವ ಮತ್ತಿತರ ಕಡೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದಾರೆ. ಈಕೆ ಕಾಸರಗೋಡು ಪೈಕ ನಿವಾಸಿ ಬಾಲಸುಬ್ರಹ್ಮಣ್ಯ ಮತ್ತು ಶ್ರೀದೇವಿ ದಂಪತಿ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article