ಜೂ.12 ರಿಂದ 14ರವರೆಗೆ ಕಾಪುವಿನಲ್ಲಿ ಸ್ವಾದ ಮತ್ತು ಸಂಭ್ರಮದ ಉತ್ಸವ, ಹಲಸು-ಮಾವು ಮೇಳ
ಅವರು ಶುಕ್ರವಾರ ಕಾಪು ಮಯೂರ ಹೊಟೇಲ್‌ನ ಸಭಾಂಗಣದಲ್ಲಿ ಶಾಸಕರ ವಿಶೇಷ ಮುತುವರ್ಜಿ ಹಾಗೂ ‘ಶಕ್ತಿ ಈವೆಂಟ್ಸ್’ ಇದರ ನೇತೃತ್ವದಲ್ಲಿ ಏರ್ಪಡಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ರೈತರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಮಾರುಕಟ್ಟೆ ಒದಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಹಲಸು, ಮಾವಿನಿಂದ ತಯಾರಿಸಬಹುದಾದ ವೈವಿದ್ಯಮಯ ಖಾದ್ಯಗಳು, ಹಪ್ಪಳ, ಉಪ್ಪಿನಕಾಯಿ, ಜ್ಯೂಸ್ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ನವಪೀಳಿಗೆಗೆ ಸ್ವದ್ಯೋಗ ಕಂಡುಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ 70ಕ್ಕೂ ಅಧಿಕ ಮಳಿಗೆಗಳು ಬರಲಿವೆ. ಕೃಷಿ ತಜ್ಞರಿಂದ ಆಧುನಿಕ ಕೃಷಿ ಪದ್ದತಿ ಮತ್ತು ತಂತ್ರಜ್ಞಾನದ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ. ಸಾರ್ವಜನಿಕರು, ಕೃಷಿ ಆಸಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿಕರನ್ನು ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಲಸು-ಮಾವು ಮೇಳದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಶಕ್ತಿ ಈವೆಂಟ್ಸ್ ಇದರ ಸಂಚಾಲಕ ಗುರುಪ್ರಸಾದ್ ಪೂರಕ ಮಾಹಿತಿ ನೀಡಿದರು.