ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮಾಸ್ಟರ್ ಫ್ಲ್ಯಾನ್: ಯೋಜನೆಯ 604 ಕೋಟಿ ರೂ. ಕಾಮಗಾರಿಗೆ ಕ್ಯಾಬಿನೆಟ್ ಒಪ್ಪಿಗೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮಾಸ್ಟರ್ ಫ್ಲ್ಯಾನ್: ಯೋಜನೆಯ 604 ಕೋಟಿ ರೂ. ಕಾಮಗಾರಿಗೆ ಕ್ಯಾಬಿನೆಟ್ ಒಪ್ಪಿಗೆ


ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಯೋಜನೆಯಲ್ಲಿ 604 ಕೋಟಿಯಲ್ಲಿ ವಿವಿಧ ಕಾಮಗಾರಿಗಳಿಗೆ ನಡೆಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಾಗಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡಿದ್ದಾರೆ.

ಮೇ.7 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ದೊರೆತಿರುವುದಾಗಿ ಅವರು ತಿಳಿಸಿದ್ದಾರೆ.

ಮಾಸ್ಟರ್ ಪ್ಲಾನ್ ಯೋಜನೆಯಂತೆ 604 ಕೋಟಿಯ ಯೋಜನೆ ಸಿದ್ದಗೊಂಡು ಹಲವು ಹಂತಗಳಲ್ಲಿ ಅನುಮತಿಗೊಂಡು ಕ್ಯಾಬಿನೆಟ್‌ನಲ್ಲಿ ಅನುಮೋದನೆ ಗೊಂಡಿದೆ. ಇದರಲ್ಲಿ ಮುಖ್ಯವಾಗಿ ದೇವಸ್ಥಾನದ ಸುತ್ತುಪೌಳಿ, ಆಶ್ಲೇಷ ಬಲಿ ಮಂಟಪ, ಭೋಜನ ಶಾಲೆ, ವಿವಿಐಪಿ ಗೆಸ್ಟ್ ಹೌಸ್, ಸ್ಟಾಪ್ ಕ್ವಾಟ್ರಸ್ ಮತ್ತಿತರರು 19 ಕೆಲಸಗಳಿವೆ. 6 ತಿಂಗಳ ಹಿಂದೆಯೇ ನಾವು ಪ್ರಸ್ತಾವನೆ ಕಳುಹಿಸಲಾಗಿದ್ದು, ಪ್ರಕ್ರಿಯೆ ನಡೆದು ಇದೀಗ ಅನುಮೋದನೆಯಾಗಿದೆ ಎಂದವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article