ಕುಕ್ಕೆ: ದೇವರ ದರ್ಶನಕ್ಕೆ ಮಧ್ಯಾಹ್ನ ಒಂದು ಗಂಟೆ ಹೆಚ್ಚುವರಿ ಲಭ್ಯ

ಕುಕ್ಕೆ: ದೇವರ ದರ್ಶನಕ್ಕೆ ಮಧ್ಯಾಹ್ನ ಒಂದು ಗಂಟೆ ಹೆಚ್ಚುವರಿ ಲಭ್ಯ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಸಮಯದಲ್ಲಿ ಅಲ್ಪ ಬದಲಾವಣೆ ಆಗಿದ್ದು, ಈ ಹಿಂದೆ ಇದ್ದಂತೆ ಮಧ್ಯಾಹ್ನ 1.30 ರಿಂದ 3.30 ರ ವರೆಗೆ ದೇವರ ದರ್ಶನ ಅವಕಾಶ ಇರಲಿಲ್ಲ, ಇದನ್ನು ಆಡಳಿತ ಮಂಡಳಿಯ ನಿರ್ಣಯದ ಮೇರೆಗೆ 2 ಗಂಟೆಯಿಂದ 3 ಗಂಟೆಯ ತನಕ ಮಾತ್ರ, ಒಂದು ಗಂಟೆಯಷ್ಟೆ ದರ್ಶನ ಬಂದ್ ಮಾಡಿ ಭಕ್ತರಿಗೆ ದೇವರ ದರ್ಶನಕ್ಕೆ ಹೆಚ್ಚುವರಿ ಒಂದು ಗಂಟೆ ಲಭಿಸುವಂತಾಗಿದೆ.

ಬೆಳಗ್ಗೆ 6.30 ರಿಂದ 2 ಗಂಟೆ ತನಕ ಅಪರಾಹ್ನ 3 ಗಂಟೆಯಿಂದ 8.30 ರ ತನಕ ದೇವರ ದರ್ಶನ ಇರಲಿದೆ. ಮಹಾಮಂಗಳಾರತಿ ಸಮಯ ಮಾತ್ರ ಈ ಹಿಂದಿನಂತೆ ಅಲ್ಪ ಕಾಲ ದೇವರ ದರ್ಶನ ಸ್ಥಗಿತಗೊಳಿಸಲಾಗುತ್ತದೆ. ಈ ವ್ಯವಸ್ಥೆ ಮೇ.10 ರಿಂದಲೇ ಜಾರಿಯಾಗಿರುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article