ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಗೆಲುವು: ವಿಜಯ್ ಅಭಿಮಾನಿಗಳಿಂದ ಸುಳ್ಯದಲ್ಲಿ ಸಂಭ್ರಮಾಚರಣೆ

ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಗೆಲುವು: ವಿಜಯ್ ಅಭಿಮಾನಿಗಳಿಂದ ಸುಳ್ಯದಲ್ಲಿ ಸಂಭ್ರಮಾಚರಣೆ


ಸುಳ್ಯ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಖ್ಯಾತ ಚಲನಚಿತ್ರ ನಟ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಟಿವಿಕೆ ಗೆಲುವು ಮತ್ತು ಪಕ್ಷದ ನೇತಾರ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ವಿಜಯ್ ಅವರ ಅಭಿಮಾನಿಗಳು ಸುಳ್ಯದಲ್ಲಿ ಸಂಭ್ರಮಾಚರಣೆ ನಡೆಸಿದರು. 

ಸುಳ್ಯದ ನಾಗಪಟ್ಟಣದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. 

ಪ್ರಮುಖರಾದ ಕಾರ್ತಿಕ್(ವಿಮಲ್), ಸುರೇಶ್, ಡೇವಿಡ್, ಅರ್ಜುನ್, ಆನಂದ್, ಗುರುರಾಜ್, ಭರತ್, ಚಿತ್ರವೇಲು, ಲತೀಶ್, ಹೇಮನಾಥ್, ಕರ್ಣ, ಕುಮಾರ್, ಗೌತಮ್, ಬಾಲಕೃಷ್ಣ, ಚಂದ್ರಶೇಖರ ಮತ್ತು ಇತರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ವಿಜಯ್ ಅವರ ಪಕ್ಷದ ಗೆಲುವಿನ ಹಿನ್ನಲೆಯಲ್ಲಿ ಸುಳ್ಯದ ವಿವಿಧ ಕಡೆಗಳಲ್ಲಿ ವಿಜಯ್ ಅಭಿಮಾನಿಗಳು ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

‘ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪಿಸಿದ ದಳಪತಿ ವಿಜಯ್ ಮೊದಲ ಚುನಾವಣೆಯಲ್ಲಿಯೇ ಅಕ್ಷರಷಃ ಅಲೆ ಎಬ್ಬಿಸಿದ್ದಾರೆ. ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿ 108 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಸರಳ ಬಹುಮತಕ್ಕೆ 118 ಸ್ಥಾನಗಳು ಬೇಕಾಗಿದ್ದು ಇತರ ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರಕಾರ ರಚಿಸುವ ಸಾಧ್ಯತೆ ಇದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article