ಧರ್ಮಸ್ಥಳದಲ್ಲಿ ಬಸದಿಯ ವಾರ್ಷಿಕೋತ್ಸವ
Monday, May 4, 2026
ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ದೇವರಿಗೆ ಸಹಸ್ರನಾಮ ಪುಷ್ಪಾರ್ಚನೆ ನಡೆಯಿತು.
ಶ್ರದ್ಧಾಅಮಿತ್ ಮತ್ತು ಊರಿನ ಶ್ರಾವಕರು, ಶ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತೋರಣಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.