ಶಾಜಾ೯ದಲ್ಲಿ ಕಾರು ಅಪಘಾತ: ಶಿತಾ೯ಡಿ ಮೂಲದ ಬಾಲಕಿ ಸಾವು
Monday, May 4, 2026
ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಮೂಲದ ಬಾಲಕಿಯೋರ್ವಳು ಭಾನುವಾರ ಶಾರ್ಜಾದಲ್ಲಿ ನಡೆದ ಅಪಘಾತದಲ್ಲಿ ಮೃತಟ್ಟಿದ್ದಾಳೆ.
ಶಿರ್ತಾಡಿಯ ದಿ.ಟಿ.ಆಲಿಯಬ್ಬ ಅವರ ಪುತ್ರ ಹಕೀಮ್ ಎಂಬವರ ಪುತ್ರಿ ಫಾತಿಮಾ ಅನಿಹಾ (5) ಈ ಅಪಘಾತದಲ್ಲಿ ಮೃತಪಟ್ಟ ಬಾಲಕಿ.
ದುಬೈ ಬಾರ್ಡರ್ ನ ಅನ್ಸಾರ್ ಮಾಲ್ ಬಳಿ ಅಪಘಾತ ನಡೆದಿದೆ.
ಹಕೀಮ್ ಅವರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬ ಕೂಡಾ ಅಲ್ಲೇ ವಾಸವಾಗಿದ್ದಾರೆ. ಭಾನುವಾರ ಶಾಪಿಂಗ್ ಮುಗಿಸಿ ವಾಪಾಸು ಬಂದು ತಮ್ಮ ಕಾರಲ್ಲಿ ಕೂರಲು ಸಿದ್ಧರಾದಾಗ ಹಿಂದಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆನ್ನಲಾಗಿದೆ.
ಫಾತಿಮ ಅನೀಹಳಿಗೆ ಜೂ. 2ಕ್ಕೆ ಐದು ವಷ೯ ಪೂಣ೯ಗೊಳ್ಳಲಿತ್ತು ಅಲ್ಲದೆ ಆಕೆಯ ವೀಸಾ ಅವಧಿ ಕೂಡಾ ಈ ದಿನಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿದು ಬಂದಿದೆ. ಆದರೆ ಈ ನಡುವೆಯೇ ಆಕೆ ಮೃತಪಟ್ಟಿದ್ದಾಳೆ.
ಹಕೀಮ್ ಅವರಿಗೆ ಮೂವರು ಗಂಡು ಮಕ್ಕಳು ,ಒಬ್ಬಳು ಪುತ್ರಿ. ಈಕೆ ಕೊನೆಯವಳು.
ಅನೀಹಾಳ ಅಂತ್ಯಕ್ರಿಯೆ ಅಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.