ಕಟೀಲಿನಲ್ಲಿ 49 ಜೋಡಿಗಳ ಸರಳ ವಿವಾಹ
Sunday, May 3, 2026
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ 49 ಜೋಡಿಗಳು ಸರಳ ವಿವಾಹವಾದರು.
ದೇವೀ ಸನ್ನಿಧಿಯಲ್ಲಿ ವಿವಾಹವಾಗುವುದಾಗಿ ಹರಕೆ ಹೊತ್ತವರು, ಸರಳ ವಿವಾಹ ಆಗಬಯಸುವವರು ಕಟೀಲಿನಲ್ಲಿ ದೇವರ ಮುಂಭಾಗದಲ್ಲಿ ವಿವಾಹವಾಗುತ್ತಿದ್ದು, ಹೀಗೆ ವಿವಾಹವಾಗುವವರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ.
ಇದೇ ಹೊತ್ತಿಗೆ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್ ಸಮಸ್ಯೆಯಿಂದಾಗಿ ಬಜಪೆ ಕಟೀಲು ರಸ್ತೆ ಬ್ಲಾಕ್ ಆಗುತ್ತಿರುವುದು ಹೆಚ್ಚುತ್ತಿದೆ.
