ಮುಂಡಾಲ ಮಹಿಳಾ ಕ್ರಿಕೆಟ್ ಲೀಗ್-2026
Sunday, May 3, 2026
ಮಂಗಳೂರು: ಮಹಿಳಾ ಕ್ರಿಕೆಟ್‌ನ್ನು ಉತ್ತೇಜಿಸುವ ಉದ್ದೇಶದಿಂದ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಂಗಳೂರು ವತಿಯಿಂದ ‘ಮುಂಡಾಲ ಮಹಿಳಾ ಕ್ರಿಕೆಟ್ ಲೀಗ್-2026’ ಅನ್ನು ನಗರದ ಬಿಜೈ ಕಾಪಿಕಾಡ್‌ನಲ್ಲಿರುವ ಪ್ರಕ್ರಿದಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮೇ.3 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರಘುವೀರ್ ಬಾಬುಗುಡ್ಡ, ಕೆನರಾ ಬ್ಯಾಂಕ್ ಉಪ್ಪಳ ಶಾಖೆಯ ವ್ಯವಸ್ಥಾಪಕಿ ಅಶ್ವಿನಿ ಕೃಷ್ಣಮೂರ್ತಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುಮನ್ ಬೆಂಗ್ರೆ, ಕ್ಲಾಸಿಕ್ ಟೂರ್ಸ್ & ಟ್ರಾವೆಲ್ಸ್‌ನ ಪ್ರೊಪ್ರೈಟರ್ ಪ್ರದೀಪ್ ಶೆಟ್ಟಿ, ಹೋಟೆಲ್ ದುರ್ಗ ಭವನದ ಪ್ರೊಪ್ರೈಟರ್ ಗಣೇಶ್, ಮಾರ್ಜಿನ್‌ಸ್ ಸೂಪರ್ ಮಾರ್ಟ್‌ನ ಮಹಮ್ಮದ್ ತಾಹಾ, ಎಸ್‌ಸಿಡಿಸಿಸಿ ಬ್ಯಾಂಕ್ ಕೋಡಿಯಾಲ್ ಬೈಲ್ ಶಾಖೆಯ ಶ್ವೇತಾ ಕಾಪಿಕಾಡ್, ಕರಾವಳಿ ಅಲೆ ಪತ್ರಿಕೆಯ ವರದಿಗಾರ್ತಿ ಚಿತ್ರಾ ಪ್ರೀತಮ್, ಟೀಮ್ ರುದ್ರದ ಮೋಹನ್ ಮುಲ್ಲಕಾಡ್, ಚಲನಚಿತ್ರ ನಟಿ ಮೇಘಾರಾಣಿ ಉಪಸ್ಥಿತರಿದ್ದರು.
