ಹೃದಯಾಘಾತದಿಂದ ನಿಧನ
Saturday, May 9, 2026
ಉಜಿರೆ: ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ ರಸ್ತೆ ನಿವಾಸಿ ಪುನೀತ್ ಕುಮಾರ್ ಎಸ್. (35) ಹೃದಯಾಘಾತದಿಂದ ಮೇ 8ರಂದು ನಿಧನ ಹೊಂದಿದರು.
ಬೆಳಗ್ಗಿನ ಜಾವ ಅವರಿಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಬಳಿಕ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ: ನಿಧನರಾದರು.
ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಅವರು ಪ್ರಸ್ತುತ ಮನೆಯಿಂದಲೇ ಉದ್ಯೋಗ ನಿರ್ವಹಿಸುತ್ತಿದ್ದರು. ಅವರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.