ಕ್ಲಸ್ಟರ್ ಮಟ್ಟದ ಸರಕಾರಿ ಶಾಲೆಗಳ ದಾಖಲಾತಿ ಆಂದೋಲನ

ಕ್ಲಸ್ಟರ್ ಮಟ್ಟದ ಸರಕಾರಿ ಶಾಲೆಗಳ ದಾಖಲಾತಿ ಆಂದೋಲನ


ಉಳ್ಳಾಲ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣವಲಯ ಹಾಗೂ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಇದರ ಸಹಯೋಗದಲ್ಲಿ ಪಿಲಾರ್ ಕ್ಲಸ್ಟರ್ ಮಟ್ಟದ ಸರಕಾರಿ ಶಾಲೆಗಳ ದಾಖಲಾತಿ ಆಂದೋಲನ  ಕೋಟೆಕಾರ್ ಬೀರಿ ಜಂಕ್ಷನ್ ನಲ್ಲಿ ಬುಧವಾರ ನಡೆಯಿತು.

ಸರಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಒಳಗೊಂಡ ಭಿತ್ತಿ ಪತ್ರವನ್ನು ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಬಿಡುಗಡೆ ಗೊಳಿಸಿ ಸರಕಾರಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ದ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಆರ್ ಈಶ್ವರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಪುರಸಭೆಯ ಕೌನ್ಸಿಲರ್ ಅಬ್ದುಲ್ ಸಲಾಮ್, ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಉದಯಕುಮಾರ್ ಶೆಟ್ಟಿ, ಬೀರಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹರೀಶ್, ಪಿಲಾರ್ ಕ್ಲಸ್ಟರ್ ಸಿಆರ್ ಪಿ ಗೀತಾ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಉಚ್ಚಿಲಗುಡ್ಡೆ ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಕುಮಾರ್  ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಚಂಚಲಾಕ್ಷಿ  ವಂದಿಸಿ, ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲ್  ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article