ಏಮಾಜೆ ದ.ಕ.ಜಿ.ಪಂ.ಕಿ.ಪ್ರಾ. ಶಾಲೆಯಲ್ಲಿ ‘ಸೃಜನೋತ್ಸವ-2026’ ಕಾರ್ಯಕ್ರಮ
ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಏಮಾಜೆ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ನಡೆದ ‘ಸೃಜನೋತ್ಸವ-2026’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಅವರು ಶಾಲೆಯ ಮಹತ್ವಾಕಾಂಕ್ಷೆಯ ದ್ವಿ-ಭಾಷಾ ಮಾಧ್ಯಮಕ್ಕೂ ಚಾಲನೆ ನೀಡಿದರು.
ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ವೃಕ್ಷೋತ್ಸವ:
ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಹಮ್ಮಿಕೊಳ್ಳಲಾದ ಹತ್ತಾರು ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಅಕ್ಷಯ ಪಾತ್ರೆಯನ್ನು ರಮೇಶ್ ಪೂಜಾರಿ ಸೂರ್ಯ ಅವರು, ಜ್ಞಾನ ವಾಹಿನಿ-2026 ಯೋಜನೆಗೆ ಜಯಲಕ್ಷ್ಮಿ ಈಶ್ವರ ಭಟ್ ಅವರು ಜ್ಞಾನ ವಾಹಿನಿ ಯೋಜನೆಗೆ ಚಾಲನೆ ನೀಡಿದರು.
ಯುವ ವೃಕ್ಷೋತ್ಸವಕ್ಕೆ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಉಚಿತ ಪರಿಕರಗಳ ವಿತರಣೆ:
ಹಾಗೆಯೇ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯಗಳು ಹಾಗೂ ಸಮವಸ್ತ್ರ ನೋಟ್ ಪುಸ್ತಕ ಉಚಿತ ಟೈ, ಐಡಿ ಕಾರ್ಡ್, ಬೆಲ್ಟ್ ವಿತರಿಸಲಾಯಿತು.
ಪದವಿ ಪ್ರದಾನ:
ಇದೇ ವೇಳೆ ಶಾಲೆಯ ನೂತನ ವಿದ್ಯಾರ್ಥಿ ಸಂಸತ್ತಿನ (ಮಂತ್ರಿಮಂಡಲ) ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ರಾಜನಾರಾಯಣ ಭಟ್ ಅವರು ನೂತನ ಮಂತ್ರಿಮಂಡಲಕ್ಕೆ ಪದವಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಹರೀಶ್ ಮೂಲ್ಯ, ಮಾಜಿ ಜನಪ್ರತಿನಿಧಿಗಳಾದ ಸಮಿತ ಡಿ. ಪೂಜಾರಿ, ಧನಂಜಯ ಗೌಡ, ಉರ್ದಿಲ ಗುತ್ತು ರಾಮ್ ಪ್ರಸಾದ್ ರೈ, ನಿರಂಜನ್ ರೈ ಕುರ್ಲೆತ್ತಿಮಾರು, ಮಾಣಿಯ ಸದಾಶಿವ ಶೆಟ್ಟಿ, ಶಾಲಾ ಅಕ್ಷರ ರತ್ನ ಪ್ರಶಸ್ತಿ ಪುರಸ್ಕೃತ ಚಿನ್ನಾ ಕಲ್ಲಡ್ಕ, ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ, ಸಹ ಶಿಕ್ಷಕರಾದ ಉದಯ ಚಂದ್ರ ಕೆ.ಎಸ್., ಹಾಗೂ ಗೌರವ ಶಿಕ್ಷಕಿ ಅಕ್ಷತಾ ಉಪಸ್ಥಿತರಿದ್ದರು.