ಅಟೋರಿಕ್ಷಾದಿಂದ ರಸ್ತೆಗೆಸೆಯಲ್ಪಟ್ಟು ಅಜ್ಜಿ ಮೊಮ್ಮಗಳಿಗೆ ಗಾಯ
Monday, June 1, 2026
ಬಂಟ್ವಾಳ: ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಉಬ್ಬಿನಲ್ಲಿ ಹಿಡಿತ ತಪ್ಪಿ ಮಹಿಳೆ ಹಾಗೂ ಮಗು ಹೊರಕ್ಕೆಸೆಯಲ್ಪಟ್ಟು ಗಾಯಗೊಂಡ ಘಟನೆ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿ ಸಂಭವಿಸಿದೆ.
ಗಾಯಗೊಂಡವರನ್ನು ಸಜಿಪಮುನ್ನೂರು ಗ್ರಾಮದ ನಿವಾಸಿ ಶ ಸಫಿಯಾ ಹಾಗೂ ಅವರ ಮೊಮ್ಮಗಳಾದ ಫಾತಿಮತ್ ನಿಶಾ (4) ಎಂದು ಹೆಸರಿಸಲಾಗಿದೆ.
ಅಟೋ ರಿಕ್ಷಾದಲ್ಲಿ ಸಜಿಪಮುನ್ನೂರು ಕಡೆಯಿಂದ ಮೆಲ್ಕಾರ್ ಮಾರ್ಗವಾಗಿ ಬಿ.ಸಿ ರೋಡಿಗೆ ಸಂಚರಿಸುತ್ತಿದ್ದ ವೇಳೆ ನರಿಕೊಂಬು ಗ್ರಾಮದ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿ ಸರ್ವಿಸ್ ರಸ್ತೆಯ ಉಬ್ಬಿನಲ್ಲಿ ಹಿಡಿತ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಸಫಿಯಾ ಹಾಗೂ ಮೊಮ್ಮಗಳು ನಿಶಾಳಿಗೆ ಗಾಯವುಂಟಾಗಿದೆ.
ಇವರಿಗೆ ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.