ಟವರಿಗೆ ಅಳವಡಿಸಿದ್ದ ಸಾವಿರಾರು ರೂ. ಮೌಲ್ಯದ ಬ್ಯಾಟರಿಗಳ ಕಳವು

ಟವರಿಗೆ ಅಳವಡಿಸಿದ್ದ ಸಾವಿರಾರು ರೂ. ಮೌಲ್ಯದ ಬ್ಯಾಟರಿಗಳ ಕಳವು

ಬಂಟ್ವಾಳ: ಸಂಸ್ಥೆಯೊಂದರ ಟವರಿಗೆ ಅಳವಡಿಸಿದ್ದ ಸಾವಿರಾರು ರೂ. ಮೌಲ್ಯದ ಬ್ಯಾಟರಿಗಳನ್ನು ಕಳವುಗೈದ ಘಟನೆ ನಾವೂರು ಗ್ರಾಮದ ಪರ್ಲ ಎಂಬಲ್ಲ ಬೆಳಕಿಗೆ ಬಂದಿದೆ.

ಈ ಬಗ್ಗೆ ಸಂಸ್ಥೆಯ ಸೆಕ್ಯೂರಿಟಿ ಸುಪರ್ ವೈಸರ್, ಕಾವೂರು ನಿವಾಸಿ ದಿನೇಶ್ ಕೆ. ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ನಾವೂರು ಗ್ರಾಮದ ಪರ್ಲ ಎಂಬಲ್ಲಿ ನಿರ್ಮಿಸಲಾಗಿರುವ ಟವರಿಗೆ ವಿದ್ಯುತ್ ಬದಲಿ ವ್ಯವಸ್ಥೆಗಾಗಿ 24 ಬ್ಯಾಟರಿಗಳನ್ನು ಅಳವಡಿಸಿದ್ದು, ಮೇ.31 ರಂದು ಬೆಳಗ್ಗಿನ ಜಾವ 1.30 ಗಂಟೆಯಿಂದ 5.30 ರ ಮಧ್ಯೆ ನೆಟ್ ವರ್ಕ್ ಸಮಸ್ಯೆಯಾಗಿದ್ದು, 5.30 ಗಂಟೆಗೆ ಟವರ್ ಟೆಕ್ನಿಷಿಯನ್ ಗಣೇಶ್ ಭಟ್ ಅವರನ್ನು ಟವರ್‌ಗೆ ಕಳಿಸಿ ಪರಿಶೀಲನೆ ನಡೆಸಿದಾಗ ಕಬ್ಬಿಣದ ಕಪಾಟಿನ ಬಾಗಿಲುಗಳು ತೆರೆದ ಸ್ಥಿತಿಯಲ್ಲಿದ್ದು, ಒಳಗೆ ನೋಡಿದಾಗ 24 ಬ್ಯಾಟರಿಗಳಲ್ಲಿ 16 ಬ್ಯಾಟರಿಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. 

ಕಳವಾಗಿರುವ ಬ್ಯಾಟರಿಗಳ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article