ಇಂದಿರಾ ಕ್ಯಾಂಟೀನ್‌ಗೆ ಮುಖ್ಯಾಧಿಕಾರಿ ಹಠಾತ್ ಭೇಟಿ
Friday, June 12, 2026
ಬಂಟ್ವಾಳ: ಬಿ.ಸಿ. ರೋಡಿನ ಆಡಳಿತ ಸೌಧದ ಸಮಿಪ ಕಾರ್ಯಾಚರಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗೆ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ. ಅವರು ಗುರುವಾರ ಮಧ್ಯಾಹ್ನ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರ್ವಹಣೆ, ಕಾರ್ಯಾನಿರ್ವಹಿಸದೆ ತುಕ್ಕು ಹಿಡಿಯುವ ಹಂತಕ್ಕೆ ತಲುಪಿರುವ ಸೊತ್ತುಗಳನ್ನು, ಕ್ಯಾಂಟೀನ್‌ನ ಒಳಗಡೆ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟವನ್ನು ಖುದ್ದು ಪರಿಶೀಲಿಸಿದ ಅವರು ಇಲ್ಲಿನ ಅಡುಗೆ ಸಿಬ್ಬಂದಿಗಳಿಂದ ಕೆಲ ಮಾಹಿತಿಯನ್ನು ಪಡೆದರು.
ಕ್ಯಾಂಟೀನ್‌ನ ಅಡುಗೆ ಕೋಣೆ ಸಹಿತ ಇಂಚು, ಇಂಚು ಪರಿಶೀಲಿಸಿದ ಮುಖ್ಯಾಧಿಕಾರಿಯವರು ಅಡುಗೆಕೋಣೆ ಮತ್ತು ಕ್ಯಾಂಟೀನ್ ಸುತ್ತ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸುವಂತೆ ಕ್ಯಾಂಟೀನ್ ಸಿಬ್ಬಂದಿಗಳಿಗೆ ಸೂಚಿಸಿದರು.
ಇಲ್ಲಿರುವ ಪ್ರಿಡ್ಜ್, ಚಪಾತಿ ಮೆಷಿನ್ ಹಾಗೂ ನೀರಿನ ಪಿಲ್ಟರ್ ಸಹಿತ ಇತರೆ ಮೆಷಿನ್‌ಗಳು ಕಳೆದ ಹಲವು ಸಮಯಗಳಿಂದ ಕೆಟ್ಟಿರುವುದನ್ನು ಅಡುಗೆ ಸಿಬ್ಬಂದಿಗಳು ಮುಖ್ಯಾಧಿಕಾರಿಯವರ ಗಮನಕ್ಕೆ ತಂದರು.
ತಿಂಗಳಿಗೆ ಕೇವಲ ಒಂದು ಗ್ಯಾಸ್ ಸಿಲಿಂಡರ್ ಲಭ್ಯವಾಗುವುದರಿಂದ ಸೌದೆ ಒಲೆಯನ್ನು ಬಳಸಿ ತಾವೇಅಡುಗೆ ತಯಾರಿಸುವ ಬಗ್ಗೆಯು ಸಿಬ್ಬಂದಿಗಳು ಮುಖ್ಯಾಧಿಕಾರಿಯವರ ಗಮನಕ್ಕೆ ತಂದರು.
ಕ್ಯಾಂಟೀನ್ ಗಾಗಮಿಸುವ ಗ್ರಾಹಕರಿಗೆ ಶುಚಿ ಮತ್ತು ರುಚಿಯಾದ ಆಹಾರವನ್ನು ಪೂರೈಸುವಂತೆ ಅವರು ಸೂಚಿಸಿದರು.