ಆಟೊ ದರ ಏರಿಸಲು ಮನವಿ

ಆಟೊ ದರ ಏರಿಸಲು ಮನವಿ


ಮಂಗಳೂರು: ಕರ್ನಾಟಕ ಪ್ರಗತಿಪರ ಆಟೋ ಚಾಲಕರ ಸಂಘದ ವತಿಯಿಂದ ಜೂ.11 ರಂದು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿಯವರಿಗೆ ಆಟೋರಿಕ್ಷಾಗಳ ಮೀಟರ್ ದರ ಹೆಚ್ಚಳದ ಬಗ್ಗೆ ಮನವಿ ಸಲ್ಲಿಸಲಾಯಿತು.

ದೇಶದಾದ್ಯಂತ ಬಡವರ ಕಾರ್ಮಿಕರ ಪರವಾಗಿ ಕೆಲಸ ಮಾಡಿಕೊಂಡು ಬಂದಿರುವಂತಹ ಸಂಘಟನೆ ಕರ್ನಾಟಕದಲ್ಲೂ ಕೂಡ ಬಡವರ ಪರ ಕೆಲಸ ಮಾಡಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಡ ಆಟೋರಿಕ್ಷಾ ಚಾಲಕರ ಪರವಾಗಿ ಧ್ವನಿಯನ್ನು ಎತ್ತುತ್ತಿದು ಮಧ್ಯ ಪ್ರಾಂತ್ಯ ದೇಶಗಳಲ್ಲಿ ಯುದ್ಧದ ಭೀತಿಯಿಂದ ಇಂಧನ ಬೆಲೆ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಗಗನಕೇರಿದ್ದು, ಆಟೋರಿಕ್ಷಾಗಳಿಗೆ ತುಂಬಿಸುವ ಇಂಧನ ಕೂಡ ಎರಡು-ಮೂರು ತಿಂಗಳಿಂದ ಸುಮಾರು 35 ರೂ.ಗಳಿಗಿಂತಲೂ ಹೆಚ್ಚಾಗಿದ್ದು ಹಾಗೂ ಆಟೋರಿಕ್ಷಗಳ ಬಿಡಿ ಭಾಗ ಮತ್ತು ಇನ್ನಿತರ ವಸ್ತುಗಳಿಗೆ ಬೆಲೆಗೆ ಏರಿಕೆಯಾಗಿದ್ದು, ಆರ್‌ಟಿಓ ಕಚೇರಿಗಳಲ್ಲಿ ಎಫ್‌ಸಿ ಇನ್ಸೂರೆನ್ಸ್ ಇತ್ಯಾದಿ ಕೆಲಸಗಳಿಗೆ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದರು.

ಮಿನಿಮಮ್ ದರ 50 ರೂ. ಕಿಲೋಮೀಟರ್‌ಗೆ 25 ರೂ. ಕಾಯುವಿಕೆಗೆ ಒಂದು ನಿಮಿಷಕ್ಕೆ 2 ರೂ.ನಂತೆ ಹೆಚ್ಚಿಸಬೇಕೆಂದು ಮನವಿ ಸಲ್ಲಿಸಲಾಯಿತು. 

ಕರ್ನಾಟಕ ಪ್ರಗತಿಪರ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅನ್ಸಾರ್ ಬಜಾಜ್, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಇ., ಉಪಾಧ್ಯಕ್ಷ ಜಾರ್ಜ್ ಕೊಂಚಾಡಿ, ಜಂಟಿ ಕಾರ್ಯದರ್ಶಿಸಿ ಕೆ.ಎಂ. ಜಿಲಾನಿ, ಸಂಘಟನಾ ಕಾರ್ಯದರ್ಶಿ ಅಸ್ಪಕ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article