ಇನ್ಫೆಂಟ್ ಜೀಸಸ್ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

ಇನ್ಫೆಂಟ್ ಜೀಸಸ್ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆ


ಮಂಗಳೂರು: ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಪುಣ್ಯಕ್ಷೇತ್ರದಲ್ಲಿ (ಬಾಲ ಯೇಸು ದೇವಸ್ಥಾನ) ಗುರುವಾರ ಪರಿಸರ ಜಾಗೃತಿ ಮತ್ತು ಸೃಷ್ಟಿಯ ಕಾಳಜಿಯನ್ನು ಉತ್ತೇಜಿಸುವ ವಿಶೇಷ ಕಾರ್ಯಕ್ರಮದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಡಿಸ್ಕಾಲ್‌ಸಿಡ್ ಕಾರ್ಮೆಲೈಟ್ಸ್‌ನ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್ ವಂ. ಜಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ‘ದೇವರಸೃಷ್ಟಿಯ ಸೌಂದರ್ಯವನ್ನು ರಕ್ಷಿಸುವ, ಪೋಷಿಸುವ ಮತ್ತು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇವರಿಗೆ ಸೇರಿದುದನ್ನು ನಾಶಪಡಿಸುವ ಯಾವುದೇ ಹಕ್ಕು ನಮಗಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ 1,000 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಸೈಂಟ್ ಜೋಸೆಫ್ ಆಶ್ರಮದ ಸುಪೀರಿಯರ್ ವಂ. ಮೆಲ್ವಿನ್ ಡಿ’ಸೋಜ, ಇನ್ಫೆಂಟ್ ಜೀಸಸ್ ಪುಣ್ಯಕ್ಷೇತ್ರದ ನಿರ್ದೇಶಕ ವಂ. ಸ್ಟಿಫನ್ ಪೆರೇರಾ, ಲಕ್ನೋ ಧರ್ಮಪ್ರಾಂತ್ಯದ ವಂ. ಡೊಮಿನಿಕ್ ಪಿಂಟೊ ಮತ್ತು ವಂ. ಅಶ್ವತ್ ಡಿಸೋಜ ಉಪಸ್ಥಿತರಿದ್ದರು. ಎವೆಲಿನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article