ಪೊಲೀಸರಿಗೆ ಯೋಗ ತರಬೇತಿ ಶಿಬಿರ

ಪೊಲೀಸರಿಗೆ ಯೋಗ ತರಬೇತಿ ಶಿಬಿರ


ಮಂಗಳೂರು: ಮಂಗಳೂರು ನಗರ ಪೊಲೀಸ್ ಘಟಕ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕುಟುಂಬದವರಿಗೆ ದೇವಿಕಾ ಯೋಗ ಕೇಂದ್ರದ ಯೋಗ ವಿಜ್ಞಾನ ಶಿಕ್ಷಕಿ ದೇವಿಕಾ ಪುರುಷೋತ್ತಮ ಅವರಿಂದ ಯೋಗ ತರಬೇತಿ ಶಿಬಿರವು ನಗರದ  ಪುರಭವನದಲ್ಲಿ ಜೂ.11 ರಂದು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್ ಪಿ. ಉದ್ಘಾಟಿಸಿದರು.

ಎಸಿಪಿ ಗೀತಾ ಕುಲಕರ್ಣಿ ಮಾತನಾಡಿ, ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಜೊತೆಗೆ  ಶಿಸ್ತು, ಸಂಯಮವನ್ನು ರೂಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಗ ಅಭ್ಯಾಸ ಉತ್ತಮ ಎಂದರು.

ಯೋಗ ಗುರು ದೇವಿಕಾ ಪುರುಷೋತ್ತಮ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.

ಎಎಸ್‌ಐ ಲಕ್ಷ್ಮಿಶ ಕಾರ್ಯಕ್ರಮ ನಿರೂಪಿಸಿದರು. ಸಿಸಿಆರ್‌ಬಿ ಎಸಿಪಿ ಕೃಷ್ಣ ಮೂರ್ತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article