ಖಾಸಗಿ ಸಿಟಿ ಬಸ್‌ಗಳ ದರ ಅಲ್ಪ ಏರಿಕೆ

ಖಾಸಗಿ ಸಿಟಿ ಬಸ್‌ಗಳ ದರ ಅಲ್ಪ ಏರಿಕೆ

ಮಂಗಳೂರು: ಮಂಗಳೂರು ನಗರ ಹಾಗೂ ಗ್ರಾಮಾಂತರ ಮಾರ್ಗಗಳಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ಗಳ ಪ್ರಯಾಣದಲ್ಲಿ ತುಸು ಏರಿಕೆ ಮಾಡಲು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ನಿರ್ಧರಿಸಿದೆ. ಜೂನ್ 13ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. 

ಈಗ ಇರುವ ಟಿಕೆಟ್ ದರ 12ರಿಂದ 20ರವರೆಗೆ 1 ಹಾಗೂ 20ಕ್ಕಿಂತ ಅಧಿಕ ಟಿಕೆಟ್ ದರವಿದ್ದರೆ ಹೆಚ್ಚುವರಿ 2 ಏರಿಕೆಯಾಗಲಿದೆ. ಶೇ 60ರ ರಿಯಾಯಿತಿ ದರದಲ್ಲಿ ಚಲೊ ಸ್ಟೂಡೆಂಟ್ ಕಾರ್ಡ್ ಅನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ತಿಳಿಸಿದ್ದಾರೆ.

ಸಿಟಿ ಬಸ್‌ಗಳ  ಪ್ರಯಾಣ ದರವನ್ನು 2021ರ ಜೂನ್ 26ರಂದು ಪರಿಷ್ಕರಣೆ ಮಾಡಲಾಗಿತ್ತು. ಐದು ವರ್ಷಗಳಿಂದ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ. ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಟೈರ್‌ಗಳ ಬಿಡಿಭಾಗ, ಆಯಿಲ್ ಮತ್ತು ಗ್ರೀಸ್, ಚಾಸಿಸ್ ದರ, ವಿಮೆ ಮೊತ್ತ, ಕಾರ್ಮಿಕರ ವೇತನ, ಟೋಲ್ ಶುಲ್ಕ, ಬ್ಯಾಟರಿ ದರ ಸೇರಿದಂತೆ ಅಗತ್ಯ ಸಾಮಗ್ರಿಗಳ ಬೆಲೆ ಶೇ 40ರಷ್ಟು ಹೆಚ್ಚಳವಾಗಿದೆ. ಬಸ್ ಉದ್ಯಮ ನಡೆಸುವುದು ಕಷ್ಟವಾಗಿದ್ದು, ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಖಾಸಗಿ ಬಸ್‌ಗಳ ಮಾಲೀಕರ ಒತ್ತಾಯದ ಮೇರೆಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article