ಕೊರಗ ಸಮುದಾಯದ ಸಭೆಗೆ ತಹಶೀಲ್ದಾರರ ಗೈರು, ಅಸಮಾಧಾನ

ಕೊರಗ ಸಮುದಾಯದ ಸಭೆಗೆ ತಹಶೀಲ್ದಾರರ ಗೈರು, ಅಸಮಾಧಾನ


ಬಂಟ್ವಾಳ: ತಾಲೂಕುಮಟ್ಟದಲ್ಲಿ  ಆದಿವಾಸಿ ಕೊರಗ ಜನಾಂಗ ಸಮುದಾಯದ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ವರ್ಷಕ್ಕೆ ಎರಡು ಸಭೆ ನಡೆಯಬೇಕೆಂಬ ಸುತ್ತೋಲೆಯಿದ್ದರೂ ಕಳೆದೆರಡೂ ಸಭೆಗೂ ತಹಶೀಲ್ದಾರರು ಗೈರು ಹಾಜರಾಗಿದ್ದು,ನಮ್ಮ ಸಮಸ್ಯೆಯನ್ನು ಪರಿಹರಿಸುವವರಾದರೂ ಯಾರು? ಎಂದು ಸಮುದಾಯದ ಮುಖಂಡರು ಗುರುವಾರ ಬಂಟ್ವಾಳ ತಾ.ಪಂ.ಎಸ್ ಜಿಎಸ್ ವೈ ಸಭಾಂಗಣದಲ್ಲಿ ನಡೆದ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಅಳಲುನ್ನುತೋಡಿಕೊಂಡರು.

ಸುಂದರಿಕನ್ಯಾನ ಅವರು ವಿಷಯ ಪ್ರಸ್ತಾವಿಸಿ ಕಳೆದೆರಡೂ ಸಭೆಗೂ ಬಂಟ್ವಾಳ ತಹಶೀಲ್ದಾರರು ಗೈರು ಹಾಜರಾಗಿದ್ದು,ಕಂದಾಯ ಮತ್ತು ಭೂಮಿಗೆ ಸಂಬಂಧಿಸಿದ ವಿಷಯವನ್ನು ಅವರೇ ಇತ್ಯರ್ಥ ಪಡಿಸಬೇಕಾಗಿದೆ, ಅವರೇ ಗೈರಾದರೆ ನಮ್ಮ  ಸಮಸ್ಯೆಯನ್ನು ಕೇಳುವವರು ಯಾರು? ಪರಿಹರಿಸುವವರು ಯಾರು? ಎಂದು ಪ್ರಶ್ನಿಸಿದರಲ್ಲದೆ ಅವರೇ ನಿಗದಿತ ದಿನಾಂಕವನ್ನು ಗೊತ್ತುಪಡಿಸಿ ಆ ದಿನವೇ ಸಭೆ ನಡೆಸುವಂತೆ ಕೋರಿದ ಅವರು ಇತರೆ ಅಧಿಕಾರಿಗಳ ಮೂಲಕ ನಾವು  ಕೊಟ್ಟ ಯಾವುದೇ ಅರ್ಜಿ  ತಹಶೀಲ್ದಾರರ ಕೈಗೆ ತಲುಪುದಿಲ್ಲ, ಖುದ್ದು ನಾವು ಅವರ ಕೊಠಡಿ ಒಳಪ್ರವೇಶಿಸಬೇಕಾದರೆ ಸಂಜೆಯ ವರೆಗೂ ಕಾದು ಕುಳಿತುಕೊಳ್ಳಬೇಕು ಎಂದು ತನಗಾದ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಲ್ಲಿ ಈ ಬಗ್ಗೆ ತಿಳಿಸಿದರೆ,ನೋಡ್ತೇವೆ,ಕೇಳ್ತೇವೆ ಎಂದು ಉತ್ತರಿಸುತ್ತಾರೆ.ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದರೆ ನಾವ್ಯಾಕೆ ಕುಂದುಕೊರತೆ ಸಭೆಗೆ ಹಾಜರಾಗಬೇಕೆಂದು ನಮ್ಮವರು ಪ್ರಶ್ನಿಸುತ್ತಾರೆ.ಹಾಗಾಗಿ ಸಮುದಾಯದ ಯಾರು ಕೂಡ ಈ ಸಭೆಗೂ ಹಾಜರಾಗಲು ಒಪ್ಪುತ್ತಿಲ್ಲ ಎಂದು ಸುಂದರಿಯವರು ಮಾರ್ಮುಕವಾಗಿ ಸಭೆಯ ಗಮನಸೆಳೆದರು.

ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಸಚ್ಚಿನ್ ಕುಮಾರ್ ಮುಂದಿನ ಜುಲೈ ತಿಂಗಳಲ್ಲೇ ತಹಶೀಲ್ದಾರರ ಉಪಸ್ಥಿತಿಯಲ್ಲಿಸಭೆಯನ್ನು ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಸಮಾಜಕಲ್ಯಾಣಾಧಿಕಾರಿಯವರಿಗೆ ಸೂಚಿಸಿದರು.

ಸ್ವಂತ ನಿವೇಶನವಿದ್ದಲ್ಲಿ ಅಂತವರ ಹೆಸರನ್ನು ವಸತಿರಹಿತರ ಪಟ್ಟಿಯಲ್ಲಿ ಸೇರಿಸಿಕೊಂಡು ಅವರಿಗೆ ಮನೆಯನ್ನು ನೀಡಲು ಅವಕಾಶವಿದೆ ಎಂದು ಇಒ ಸಚ್ಚಿನ್ ತಿಳಿಸಿದರಲ್ಲದೆ ಈಗಾಗಲೇ ನಾಲ್ಕು ಂಮದಿ ಫಲಾನುಭವಿಗಳಿಗೆ ಚೆನ್ನೈತ್ತೋಡಿ ಗ್ರಾಮದಲ್ಲಿ ನಿವೇಶನ ಕಾಯ್ದಿರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಫಲಾನುಭವಿಗಳು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಶೀಘ್ರವಾಗಿ ಜಮೀನುಮಂಜೂರುಗೊಳ್ಳಲಿದೆ ಎಂದು ಇಒ ತಿಳಿಸಿದರು.

ಕೊರಗ ಸಮುದಾಯ ಜಮೀನಿನ ಅಲಭ್ಯತೆಯಿಂದಾಗಿ ಕೊರಗುತ್ತಿದ್ದು, ಇದರಿಂದಾಗಿ ಸರಕಾರದ ಯಾವುದೇ ಯೋಜನೆಗಳನ್ನು ಪಡೆಯಲಾಗದೆ ವಂಚನೆಗೊಳಗಾಗುತ್ತಿದ್ದೆವೆ. ಕೊರಗ ಸಮುದಾಯದ ವಾಸಿಸುವ  ಕುಟುಂಬ ವಾರೀಸುದಾರರ ಹೆಸರಿನಲ್ಲಿ ಪೌತಿ ಖಾತೆಯ ಮೂಲಕ ಜಮೀನನ್ನು ದಾಖಲೆ ಮಾಡಿಕೊಡುವಂತೆ ಪ್ರತಿ ಸಭೆಯಲ್ಲು ಪದೇಪದೇ  ಮನವಿ ಮಾಡಲಾಗುತ್ತಿದೆಯಾದರೂ ಅದಿನ್ನು ಸಾಧ್ಯವಾಗಿಲ್ಲ,ಈ ಕಾರಣದಿಂದ ಸಮುದಾಯ ಇನ್ನೂ ಕೂಡ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ ಎಂದು ಸಮುದಾಯ ಮುಖಂಡ ಸುಂದರ ಅವರು ತಿಳಿಸಿದರು.

ವಾರೀಸುದಾರರ ಹೆಸರಿನಲ್ಲಿ ದಾಖಲಾತಿ ಮಾಡುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳೇ ವಿಶೇಷ ಆದೇಶ ಹೊರಡಿಸಬೇಕಾಗುತ್ತದೆ ಎಂದು ಉಪತಹಶೀಲ್ದಾರ್ ದಿವಾಕರ ಮುಗುಳ್ಯ ತಿಳಿಸಿದರು.

ಸಮುದಾಯದ ಹಿತದೃಷ್ಠಿಯಿಂದ ಸರಕಾರಗಳು ಸಾರ್ವತ್ರಿಕ ಕಾರ್ಯಕ್ರಮದಲ್ಲಿ ಕೊರಗ ಸಮುದಾಯ ಸಕ್ರಿಯವಾಗಿ ಪಾಲ್ಗೊಂಡು ಮುಖ್ಯವಾಹಿನಿ ಬರಲು ಹಿಂಜರಿಯುತ್ತಿರುವ ಬಗ್ಗೆ ತಾ.ಪಂ.ಇಒ ಸಚ್ಚಿನ್ ಅವರು ಬೇಸರ ವ್ಯಕ್ತಪಡಿಸಿದರು.

ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯ ದಿಂಡಿಕೆರೆ ಎಂಬಲ್ಲಿ ಕೊರಗ ಕಾಲೊನಿಗೆ ಸಮರ್ಪಕವಾಗಿ ಪೂರೈಸದೆ ಬಗ್ಗೆ ಸಮುದಾಯದ ಮುಖಂಡರೋರ್ವರು ಅಧಿಕಾರಿಗಳ ಗಮನಕ್ಕೆ ತಂದರು.

ಕೊರಗ ಸಮುದಾಯಕ್ಕೆ ಸರಕಾರದಿಂದ ವಿವಿಧ ಯೋಜನೆಗಳು ದೊರಕುತ್ತಿದ್ದು ಮಾಹಿತಿ ಕೊರತೆಯಿಂದ  ತಲುಪುವಲ್ಲಿ ವಿಳಂಭವಾಗುತ್ತಿದ್ದು ಈ ನಿಟ್ಟಿನಲ್ಲಿ ಸಮುದಾಯದ ನಾಯಕರು ತಿಳಿಹೇಳಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಮುತುವರ್ಜಿ ವಹಿಸುವಂತೆ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ( ಗ್ರೇಡ್ 2) ವಿನಯ ಕುಮಾರಿ ತಿಳಿಸಿದರು.

10.30 ಕ್ಕೆ ಆರಂಭವಾಗಬೇಕಿದ್ದ ಕೊರಗ ಸಮುದಾಯದ ಅಭಿವೃದ್ಧಿ ಸಮಿತಿ ಸಭೆ ಸುಮಾರು 50 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು.

ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ವೇದಿಕೆಯಲ್ಲಿದ್ದರು. ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ( ಗ್ರೇಡ್ 2) ವಿನಯ ಕುಮಾರಿ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article