ಯುವವಾಹಿನಿ ಮಾಣಿ ಘಟಕದಿಂದ ಯುವ ವೃಕ್ಷೋತ್ಸವಕ್ಕೆ ಚಾಲನೆ

ಯುವವಾಹಿನಿ ಮಾಣಿ ಘಟಕದಿಂದ ಯುವ ವೃಕ್ಷೋತ್ಸವಕ್ಕೆ ಚಾಲನೆ


ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಮಾಣಿ ಘಟಕದ ವತಿಯಿಂದ ‘ಮರದ ನೆರಳು ಬದುಕಿಗೆ ನೆರಳು’ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಯುವ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಭಾಭವನದ ವಠಾರದಲ್ಲಿ ಚಾಲನೆ ನೀಡಲಾಯಿತು.

ನಾರಾಯಣ ಗುರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಸಾಲಿಯಾನ್ ಉದ್ಘಾಟಿಸಿದರು. ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಾರ್ಯದರ್ಶಿ ರಮೇಶ್ ಪೂಜಾರಿ ಮುಜಲ, ಸಿಇಒ ಪಲ್ಲವಿ ಲೋಕೇಶ್, ಪ್ರಚಾರ ನಿರ್ದೇಶಕ ಚರಣ್, ಗೀತಾ ಹಾಗೂ ಮ್ಯಾನೇಜರ್ ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು.

ಅಭಿಯಾನದ ಅಂಗವಾಗಿ ಬಾಬನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನಂತಾಡಿ ಗ್ರಾಮ ಪಂಚಾಯಿತ್‌ನಲ್ಲಿ ಯುವ ವೃಕ್ಷೋತ್ಸವವನ್ನು ಕೈಗೊಳ್ಳಲಾಯಿತು.

ಈ ವಿಭಿನ್ನ ವೃಕ್ಷೋತ್ಸವ ಅಭಿಯಾನವು ಸರಕಾರಿ ಶಾಲೆ, ಆಸ್ಪತ್ರೆ, ಗ್ರಾಮ ಪಂಚಾಯತ್ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ಮುಂದುವರಿಯಲಿದೆ ಎಂದು ಘಟಕದ ಅಧ್ಯಕ್ಷ ಗಣೇಶ್ ಸಾಯಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article