ಜೂ.7ಕ್ಕೆ ಬ್ರಹ್ಮಾವರದಲ್ಲಿ ಗಾಂಜಾ, ಡ್ರಗ್ ವ್ಯಸನ, ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್

ಜೂ.7ಕ್ಕೆ ಬ್ರಹ್ಮಾವರದಲ್ಲಿ ಗಾಂಜಾ, ಡ್ರಗ್ ವ್ಯಸನ, ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್

ಕುಂದಾಪುರ: ಜನಸೇವಾ ಟ್ರಸ್ಟ್ ಗಿಳಿಯಾರು ಮತ್ತು ಟೀಮ್ ಅಭಿಮತ ಆಶ್ರಯದಲ್ಲಿ, ಸ್ಥಳೀಯ ಐವತ್ತಕ್ಕೂ ಹೆಚ್ಚು ಸಂಘಟನೆಗಳ ಸಹಕಾರದಲ್ಲಿ ಗಾಂಜಾ, ಡ್ರಗ್ ವ್ಯಸನ ಹಾಗೂ ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್  ಜೂ.7 ರ ಆದಿತ್ಯವಾರ ಬೆಳಿಗ್ಗೆ 8 ಗಂಟೆಗೆ ಬ್ರಹ್ಮಾವರದ ಮದರ್ ಪ್ಯಾಲೇಸ್ ಹೋಟೆಲಿನ ಮುಂಭಾಗದಿಂದ ನಡೆಯಲಿದೆ ಎಂದು ಜನಸೇವಾ ಟ್ರಸ್ಟ್ ಪ್ರಮುಖರಾದ ಶರತ್ ಶೆಟ್ಟಿ ಕೊತ್ತಾಡಿ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದ.ಕ. ಸಂಸದ ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಮೋದ್ ಮಂದಾರ್ತಿ, ಬಾರ್ಕೂರು ಶ್ರೀನಿವಾಸ್ ಶೆಟ್ಟಿ, ರವೀಂದ್ರ ಹೇರೂರು, ಡಿ.ಸಿ. ಉಮೇಶ್ ಶೆಟ್ಟಿ, ಕಾರ್ತೇಶ್, ನಿಖಿಲ್ ನಾಯಕ್, ಸುರೇಶ್ ಕುಮಾರ್ ಬ್ರಹ್ಮಾವರ ಇನ್ನಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article