ಕಲುಷಿತ ಆಹಾರ ಸೇವಿಸಿ 15 ವಿದ್ಯಾರ್ಥಿಗಳು ಅಸ್ವಸ್ಥ
Sunday, June 14, 2026
ಮಂಗಳೂರು: ಮಂಗಳೂರಿನಿಂದ ಪ್ರವಾಸ ಹೊರಟಿದ್ದ ಖಾಸಗಿ ಕಾಲೇಜಿನ 15 ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವಿಸಿದ ಪರಿಣಾಮ ಅಸ್ವಸ್ಥಗೊಂಡ ಘಟನೆ ಶುಕ್ರವಾರ ತಮಿಳುನಾಡಿನ ಉದಕ ಮಂಡಲ(ಊಟಿ)ದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ನಗರದ ಕಾಲೇಜಿನ ವಿದ್ಯಾರ್ಥಿಗಳು ಐದು ದಿನಗಳ ಪ್ರವಾಸಕ್ಕಾಗಿ ಊಟಿಗೆ ತೆರಳಿದ್ದು, ಅಲ್ಲಿರುವ ಹೋಮ್‌ಸ್ಟೇವೊಂದರಲ್ಲಿ ತಂಗಿದ್ದರು ಎನ್ನಲಾಗಿದೆ. ಈ ಮಧ್ಯೆ ವಿದ್ಯಾರ್ಥಿಗಳು ಶುಕ್ರವಾರ ಸೇವಿಸಿದ ಆಹಾರದಿಂದ ಸಮಸ್ಯೆಯುಂಟಾಗಿದ್ದು, ಅವರನ್ನು ಊಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಊಟಿಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.