ಸಿಇಟಿ 2026ರಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳ ಪ್ರಾಬಲ್ಯ: ಮೊದಲ 50 ರ‍್ಯಾಂಕ್‌ಗಳಲ್ಲಿ 116 ಸ್ಥಾನ

ಸಿಇಟಿ 2026ರಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳ ಪ್ರಾಬಲ್ಯ: ಮೊದಲ 50 ರ‍್ಯಾಂಕ್‌ಗಳಲ್ಲಿ 116 ಸ್ಥಾನ


ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ಸಿಇಟಿ ಪರೀಕ್ಷೆಯ 12 ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 50 ರ‍್ಯಾಂಕ್‌ಗಳಲ್ಲಿ 116 ಸ್ಥಾನವನ್ನು ಪಡೆದು ಹೊಸ ಇತಿಹಾಸವನ್ನು ಸಂಸ್ಥೆಯು ನಿರ್ಮಾಣ ಮಾಡಿದೆ.

ಮೊದಲ 10 ರ‍್ಯಾಂಕ್‌ಗಳಲ್ಲಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೊದಲ 3ನೇ ರ‍್ಯಾಂಕ್, ಮೂವರು ವಿದ್ಯಾರ್ಥಿಗಳು ನಾಲ್ಕನೇ ರ‍್ಯಾಂಕ್, ಓರ್ವ ವಿದ್ಯಾರ್ಥಿ ಆರನೇ ರ‍್ಯಾಂಕ್, ಮೂವರು ವಿದ್ಯಾರ್ಥಿಗಳು ಏಳನೇ ರ‍್ಯಾಂಕ್, ಐವರು ವಿದ್ಯಾರ್ಥಿಗಳು ಎಂಟನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.


ಮೊದಲ 100 ರ‍್ಯಾಂಕ್‌ನಲ್ಲಿ 246 ಸ್ಥಾನ, ಮೊದಲ 150ರಲ್ಲಿ 343 ಸ್ಥಾನ, ಮೊದಲ 200 ರ‍್ಯಾಂಕ್‌ಗಳಲ್ಲಿ 435, ಮೊದಲ 300 ರ‍್ಯಾಂಕ್‌ಗಳಲ್ಲಿ 572, ಮೊದಲ 400 ರ‍್ಯಾಂಕ್‌ಗಳಲ್ಲಿ 704, ಮೊದಲ 500 ರ‍್ಯಾಂಕ್‌ಗಳಲ್ಲಿ 855, ಮೊದಲ 1000 ರ‍್ಯಾಂಕ್‌ಗಳಲ್ಲಿ 1392 ಸ್ಥಾನಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಸಮಯ್ ಎ.ಎಸ್ ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 3ನೇ ರ‍್ಯಾಂಕ್ ಮತ್ತು ಎಂಜಿನಿಯರಿAಗ್‌ನಲ್ಲಿ 23ನೇ ರ‍್ಯಾಂಕ್ ಪಡೆದಿದ್ದಾರೆ. ರಿಶಿಕಾ ಕೆ.ಎಸ್. ಅವರು ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 4ನೇ ರ‍್ಯಾಂಕ್ ಮತ್ತು ಎಂಜಿನಿಯರಿAಗ್‌ನಲ್ಲಿ 20, ನರ್ಸಿಂಗ್‌ನಲ್ಲಿ 26, ಪಶು ವೈದ್ಯಕೀಯದಲ್ಲಿ 26, ಬಿಎನ್‌ವೈಎಸ್‌ನಲ್ಲಿ 41ನೇ ರ‍್ಯಾಂಕ್ ಪಡೆದಿದ್ದಾರೆ. ಅಂಕಿತ್ ಅಶೋಕ್ ದೊಡವಾಳ ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 6ನೇ ರ‍್ಯಾಂಕ್, ಬಿ ಫಾರ್ಮಾ, ನರ್ಸಿಂಗ್, ಫಾರ್ಮಾ ಡಿ, ಪಶುವೈದ್ಯಕೀಯದಲ್ಲಿ 11ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 32, ಎಂಜಿನಿಯರಿAಗ್‌ನಲ್ಲಿ 43ನೇ ರ‍್ಯಾಂಕ್ ಪಡೆದರೆ, ದೀಕ್ಷಾ ಶೆಣೈ ಅವರು ಬಿಎನ್‌ವೈಎಸ್‌ನಲ್ಲಿ 6ನೇ ರ‍್ಯಾಂಕ್, ಪಶುವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ 14, ಬಿ-ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 30ನೇ ರ‍್ಯಾಂಕ್ ಪಡೆದಿದ್ದಾರೆ. ಅರಳೆ ವಿರೂಪಾಕ್ಷಿ ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 7ನೇ ರ‍್ಯಾಂಕ್, ಪಶುವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌ನಲ್ಲಿ 33ನೇ ರ‍್ಯಾಂಕ್, ಎಂಜಿನಿಯರಿAಗ್‌ನಲ್ಲಿ 36 ಹಾಗೂ ಬಿಎನ್‌ವೈಎಸ್‌ನಲ್ಲಿ 42ನೇ ರ‍್ಯಾಂಕ್ ಪಡೆದರೆ, ಕೃತಿಕಾ ಮಲ್ಲಿಕಾರ್ಜುನ ಪಾಟೀಲ್ ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 8ನೇ ರ‍್ಯಾಂಕ್, ಎಂಜಿನಿಯರಿAಗ್‌ನಲ್ಲಿ 40ನೇ ರ‍್ಯಾಂಕ್ ಪಡೆದಿದ್ದಾರೆ. ರಿಷಬ್ ಎಂ. ಶೆಟ್ಟಿ ಅವರು ನರ್ಸಿಂಗ್ ಮತ್ತು ಪಶುವೈದ್ಯಕೀಯದಲ್ಲಿ 8ನೇ ರ‍್ಯಾಂಕ್, ಬಿಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 15ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಸಾಧನೆ ಮಾಡಿದ ಉಳಿದ ಪ್ರಮುಖ ವಿದ್ಯಾರ್ಥಿಗಳೆಂದರೆ ಧೀರಜ್ ಎನ್. (ಬಿಎನ್‌ವೈಎಸ್ - 12, ನರ್ಸಿಂಗ್ ಹಾಗೂ ಪಶುವೈದ್ಯಕೀಯ - 28, ಬಿಪಿಟಿ, ಫುಡ್‌ಸೈನ್ಸ್, ಡಿ ಫಾರ್ಮಾ, ಕೃಷಿ, ಸೆರಿಕಲ್ಚರ್, ಹಾಗೂ ಎಎಚ್‌ಎಸ್‌ನಲ್ಲಿ 50ನೇ ರ‍್ಯಾಂಕ್), ಪ್ರೇರಣಾ ಪಾಟೀಲ್ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 13, ಬಿಎನ್‌ವೈಎಸ್‌ನಲ್ಲಿ 44ನೇ ರ‍್ಯಾಂಕ್), ಉಜ್ವಲ್ ಶಿವಾನಂದ್ ಬೂದಿಹಾಳ್ (ಎಂಜಿನಿಯರಿAಗ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 15, ಬಿಎನ್‌ವೈಎಸ್‌ನಲ್ಲಿ 47ನೇ ರ‍್ಯಾಂಕ್), ತನ್ಮಯ್ ಆರ್. ಎಸ್. ಪಾಡಿಗಟ್ಟೆ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 16ನೇ ರ‍್ಯಾಂಕ್, ಬಿ ಫಾರ್ಮಾ, ಫಾರ್ಮಾ ಡಿಯಲ್ಲಿ 38, ನರ್ಸಿಂಗ್, ಪಶುವೈದ್ಯಕೀಯ ಹಾಗೂ ಬಿಎನ್‌ವೈಎಸ್ 43ನೇ ರ‍್ಯಾಂಕ್), ದೀಪಕ್ ಗೌಡ ಎಂ. (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 23ನೇ ರ‍್ಯಾಂಕ್), ಜಿ.ಸಿಂಚನ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 24ನೇ ರ‍್ಯಾಂಕ್), ಶ್ರೀವತ್ಸ ಎಂ. (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ - 26ನೇ ರ‍್ಯಾಂಕ್), ಸಾರ್ಥಕ್ ಆರ್. ಶೆಟ್ಟಿ (ಎಂಜಿನಿಯರಿAಗ್‌ನಲ್ಲಿ 26, ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 37ನೇ ರ‍್ಯಾಂಕ್), ಕದಂ ಸಾತ್ವಿಕ್ ಸುನಿಲ್ (ನರ್ಸಿಂಗ್ ಹಾಗೂ ಪಶುವೈದ್ಯಕೀಯದಲ್ಲಿ 27ನೇ ರ‍್ಯಾಂಕ್), ಯಶಸ್ ಎನ್.ಎಂ. (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 29ನೇ ರ‍್ಯಾಂಕ್), ಕೆ.ವೈ. ವೀಕ್ಷಿತ್ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 30ನೇ ರ‍್ಯಾಂಕ್), ನಿತೀಶ್ ಗೋಪಾಲ್ (ಎಂಜಿನಿಯರಿAಗ್ 31ನೇ ರ‍್ಯಾಂಕ್), ವರುಣ್ ಚಾಕೋಟ್ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 32ನೇ ರ‍್ಯಾಂಕ್), ಮುಕ್ತಾ ಎಸ್ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 34ನೇ ರ‍್ಯಾಂಕ್), ಮಿಲನ್ ಮಾದೇಶ ಎಸ್. (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 36ನೇ ರ‍್ಯಾಂಕ್), ಅಮೋಘ ವರ್ಷ ಜಿ. (ಬಿಎನ್‌ವೈಎಸ್‌ನಲ್ಲಿ 26, ಬಿ ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 37ನೇ ರ‍್ಯಾಂಕ್, ನರ್ಸಿಂಗ್ ಹಾಗೂ ಪಶುವೈದ್ಯಕೀಯದಲ್ಲಿ 42ನೇ ರ‍್ಯಾಂಕ್), ಅಮೋಘ್ ಬಿ. ಲೋಕ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 39ನೇ ರ‍್ಯಾಂಕ್), ನಂದನ್ ನಾಯಕ್ (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 40ನೇ ರ‍್ಯಾಂಕ್), ರಾಜೀವ್ ಲೋಚನ್ ರೆಡ್ಡಿ ಟಿ. (ಬಿಪಿಒ- 40ನೇ ರ‍್ಯಾಂಕ್), ನರೆನ್ ವಿ. (ಎಂಜಿನಿಯರಿAಗ್ - 44ನೇ ರ‍್ಯಾಂಕ್), ಪೊನ್ನೇಶ್ ಎ.ಸಿ. (ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 45ನೇ ರ‍್ಯಾಂಕ್), ಜೀವನ್ ಫ್ರಾನ್ಸಿಸ್ ಫೆರ್ನಾಂಡಿಸ್ (ಬಿಎನ್‌ವೈಎಸ್ - 45ನೇ ರ‍್ಯಾಂಕ್), ನಿಖಿಲ್ ಭೂಷಣ್ ಶ್ರೀನಿವಾಸ್ (ಬಿಎನ್‌ವೈಎಸ್ - 46ನೇ ರ‍್ಯಾಂಕ್), ಡಿ. ನವನೀತ್ ಎನ್. ಪೈ (ಬಿಪಿಟಿ, ಡಿ-ಫಾರ್ಮಾ, ಎಎಚ್‌ಎಸ್‌ನಲ್ಲಿ 49ನೇ ರ‍್ಯಾಂಕ್), ಆರ್ನವ್ ಅಗರ್ವಾಲ್ (ಬಿಎನ್‌ವೈಎಸ್ - 48ನೇ ರ‍್ಯಾಂಕ್) ಆಗಿದ್ದಾರೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2026ರ ಫಲಿತಾಂಶದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಧಿಸಿರುವ ಅತ್ಯುತ್ತಮ ಯಶಸ್ಸು ನಮಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ. ವಿದ್ಯಾರ್ಥಿಗಳ ಈ ಸಾಧನೆಯು ಅವರ ನಿರಂತರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ನಮ್ಮ ಶಿಕ್ಷಕರ ಸಮರ್ಪಿತ ಮಾರ್ಗದರ್ಶನದ ಪ್ರತಿಫಲವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪರಿಸರ, ಸರಿಯಾದ ಉತ್ತಮ ಮಾರ್ಗದರ್ಶನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಶೈಕ್ಷಣಿಕ ಗುಣಮಟ್ಟ, ಶಿಸ್ತು ಮತ್ತು ವಿದ್ಯಾರ್ಥಿ ಕೇಂದ್ರಿತ ತರಬೇತಿಗೆ ನಾವು ನೀಡಿರುವ ಆದ್ಯತೆಯು ಈ ಯಶಸ್ಸಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಮಟ್ಟದಲ್ಲಿ ಉನ್ನತ ರ‍್ಯಾಂಕ್ ಗಳಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article