ಪ್ರಿಯಾಂಕಾ ಖರ್ಗೆಯ ದರ್ಪದ ನುಡಿ, ಕಾಂಗ್ರೆಸ್ ಸರ್ಕಾರದ ಅವಸಾನಕ್ಕೆ ಮುನ್ನುಡಿ: ಸತೀಶ್ ಕುಂಪಲ

ಪ್ರಿಯಾಂಕಾ ಖರ್ಗೆಯ ದರ್ಪದ ನುಡಿ, ಕಾಂಗ್ರೆಸ್ ಸರ್ಕಾರದ ಅವಸಾನಕ್ಕೆ ಮುನ್ನುಡಿ: ಸತೀಶ್ ಕುಂಪಲ


ಮಂಗಳೂರು: ಕರ್ನಾಟಕದ ನೂತನ ಸರ್ಕಾರದಲ್ಲಿ ಗೃಹಖಾತೆಯ ಮಹತ್ತರ ಜವಾಬ್ದಾರಿ ಯನ್ನು ಪಡೆದಿರುವ ಪ್ರಿಯಾಂಕ ಖರ್ಗೆಯವರ ವರ್ತನೆ ಅಧಿಕಾರ ಇರುವುದೇ ತುಷ್ಠೀಕರಣಕ್ಕಾಗಿ ಮತ್ತು ಹಿಂದು ವಿರೋಧಿ ನಡೆಗಾಗಿ ಎನ್ನುವಂತಿದೆ. 

ಹಿಂದು ಧರ್ಮದ ಕಾರ್ಯ ಮತ್ತು ಸಂಘಟನೆಯನ್ನು ನಡೆಸುತ್ತಿರುವ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಖರ್ಗೆಯ ದುರ್ವರ್ತನೆ ಖಂಡನೀಯ. ಅಧಿಕಾರದ ಮದದಲ್ಲಿ ಈ ರೀತಿ ಹೇಳಿಕೆ ನೀಡಿರುವುದನ್ನು ಜನರು ಮುಂದಿನ ಚುನಾವಣೆಯಲ್ಲಿ ನೆನಪಿಡಲಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ. ಭಟ್ ಅವರು ವಿದ್ಯಾಸಂಸ್ಥೆಯ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವವರು ಮತ್ತು ಹಿಂದು ಸಂಘಟನೆಗೆ ಶಕ್ತಿ ನೀಡಿದವರು ಹಿಂದೆ ರಮಾನಾಥ ರೈ ಅವರ ದರ್ಪದ ಮಾತುಗಳಿಗೆ ಮತದಾರ ಸೂಕ್ತ ಪಾಠ ಕಲಿಸಿದ್ದಾರೆ ಮುಂದೆ ರಾಜ್ಯದ ಮತದಾರ ಕಾಂಗ್ರೆಸ್‌ಗೆ ಸರಿಯಾದ ಉತ್ತರ ನೀಡಲಿದ್ಸಾರೆ. ಜೂನಿಯರ್ ಖರ್ಗೆಯ ದರ್ಪದ ನುಡಿಗಳು ಕಾಂಗ್ರೆಸ್ ಸರ್ಕಾರದ ಅವಸಾನಕ್ಕೆ ಮುನ್ನುಡಿ ಆಗಲಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article