ಜನರನ್ನು ತಲೆ ಎತ್ತಿ ನಡೆಯುವ ಕೆಲಸ ಮಾಡುತ್ತೇನೆ: ಯು.ಟಿ. ಖಾದರ್

ಜನರನ್ನು ತಲೆ ಎತ್ತಿ ನಡೆಯುವ ಕೆಲಸ ಮಾಡುತ್ತೇನೆ: ಯು.ಟಿ. ಖಾದರ್


ಉಳ್ಳಾಲ: ರಾಜ್ಯ ಸರ್ಕಾರದ ಆರೋಗ್ಯ, ವಸತಿ ಸಹಿತ ನಾಲ್ಕು ಇಲಾಖೆಗಳ ಸಚಿವನಾಗಿ, ಸ್ಪೀಕರ್ ಆದ ಬಳಿಕ ಇದೀಗ ಎರಡನೇ ಬಾರಿ ಆರೋಗ್ಯ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಈ ಅವಧಿಯಲ್ಲಿ ಜನರನ್ನು ತಲೆ ಎತ್ತಿ ನಡೆಯುವ ಕೆಲಸ ಮಾಡುತ್ತೇನೆ ಹೊರತು ತಲೆತಗ್ಗಿಸುವಂತೆ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಆರೋಗ್ಯ ಸಚಿವರಾಗಿ ಚೀರುಂಬ ಭಗವತಿ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿ, ಈಗ ರಾಜ್ಯದ ಜನತೆಯ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಆರೋಗ್ಯ ಸಂಬಂಧಿಸಿ ದೊಡ್ಡ ಮಟ್ಟದ ಕೆಲಸ ಆಗಬೇಕು. ಈ ಬಗ್ಗೆ ಚರ್ಚೆ ಆಗಬೇಕು. ಆರೋಗ್ಯ ಸಂಬಂಧಿಸಿ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಇದ್ದರೆ ನನ್ನ ಗಮನಕ್ಕೆ ತರಬಹುದು. ಅದನ್ನು ಚರ್ಚಿಸಿ ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಅವರು ಭೇಟಿ ನೀಡಿದ ಸಂದರ್ಭ ಕ್ಷೇತ್ರದ ಸಮಿತಿ ಸದಸ್ಯರು ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು.

ಭಗವತಿ ಕ್ಷೇತ್ರದಲ್ಲಿ ಆಡಳಿತ ಮುಕ್ತೇಸರ ಸುರೇಶ್ ಭಟ್ನಗರ, ಅಧ್ಯಕ್ಷ ಚಿದಾನಂದ ಗುರಿಕಾರ, ಸುರೇಖ, ದೇವಕಿ ಉಳ್ಳಾಲ, ಪುರುಷೋತ್ತಮ ಶೆಟ್ಟಿ ಪಿಲಾರ್, ಸದಾಶಿವ ಉಳ್ಳಾಲ್, ಶಾಲಿನಿ ಶೆಟ್ಟಿ, ವಿಶ್ವನಾಥ್, ಬಾಬು ಸುವರ್ಣ, ದಿನೇಶ್ ಕುಂಪಲ, ಉಮೇಶ್ ಬೆಂಜರ ಪದವು, ಭಗವಾನ್ ದಾಸ್, ಮಾಧವಿ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

ನವನೀತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article