ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೈಟೆಕ್ 'AI' ತರಬೇತಿ: Govt Certified ಎ.ಐ ಪ್ರೊಫೆಷನಲ್ ಆಗಲು ಅರ್ಜಿ ಆಹ್ವಾನ
ಮಂಗಳೂರು: ವಸತಿ-ಆಹಾರ ಸೌಲಭ್ಯದೊಂದಿಗೆ ಪ್ರಾಕ್ಟಿಕಲ್ AI ತರಬೇತಿ ಪಡೆದು, Govt Certified AI Professional' ಆಗಿ, ಅತ್ಯಂತ ಬೇಡಿಕೆ ಇರುವ 84ಕ್ಕೂ ಹೆಚ್ಚು ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಆದಾಯ ಗಳಿಸಲು ಈ ಅಪರೂಪದ ಹೈಟೆಕ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇತ್ತೀಚೆಗೆ ಪದವಿ ಮತ್ತು ಇಂಜಿನಿಯರಿಂಗ್ ಸರ್ಟಿಫಿಕೇಟ್‌ಗಳು ಕೈಯಲ್ಲಿದ್ದರೂ ಮಾರುಕಟ್ಟೆಯಲ್ಲಿ ನಿರೀಕ್ಷಿತ ಆದಾಯದ ಉದ್ಯೋಗ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಜಾಗತಿಕ ಉದ್ಯೋಗ ಮಾರುಕಟ್ಟೆ ಈಗ ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಕಡೆಗೆ ಬದಲಾಗಿರುವುದು. ಇಂದಿನ ಕಹಿ ಸತ್ಯವೇನೆಂದರೆ, ಮುಂದಿನ ದಿನಗಳಲ್ಲಿ ತಂತ್ರಜ್ಞಾನದಿಂದಾಗಿ ಸುಮಾರು 7 ಕೋಟಿ ಸಾಂಪ್ರದಾಯಿಕ ಉದ್ಯೋಗಗಳು ಕಣ್ಮರೆಯಾಗಲಿದ್ದು, ಅದೇ ಸಮಯದಲ್ಲಿ AI ಆಧಾರಿತ ಒಟ್ಟು 17 ಕೋಟಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಈ ಜಾಗತಿಕ ಅವಕಾಶವನ್ನು ಕರ್ನಾಟಕದ ಯುವಜನತೆ ಪಡೆದುಕೊಳ್ಳಬೇಕಾದರೆ AI ಕೌಶಲ್ಯ ಅತ್ಯಗತ್ಯ. ಈ ಅಗತ್ಯತೆಯನ್ನು ಮನಗಂಡು, ಕರ್ನಾಟಕ ತಾಂತ್ರಿಕ ಮಹಾವಿದ್ಯಾಲಯವು (KPT) YATICORP ಸಂಸ್ಥೆಯ ಸಹಭಾಗಿತ್ವದಲ್ಲಿ "AI ಪ್ರಗತಿ ಪಥ" ಎಂಬ ವಿಶಿಷ್ಟ ತರಬೇತಿಯನ್ನು ಆಯೋಜಿಸಿದೆ. ಇದರಲ್ಲಿ 1 ವಾರದ ವಸತಿ ಸಹಿತ ಪ್ರಾಯೋಗಿಕ ತರಬೇತಿಯ ಬಳಿಕ, 3 ತಿಂಗಳ ಇಂಟರ್ನ್‌ಶಿಪ್, ಆಳವಾದ AI ಕಲಿಕೆ ಹಾಗೂ ಉದ್ಯೋಗ ಮತ್ತು ಸ್ವಂತ ಉದ್ಯಮ ಆರಂಭಿಸಲು ಸಂಪೂರ್ಣ ಸಪೋರ್ಟ್ ನೀಡಲಾಗುತ್ತದೆ. ಅತ್ಯಂತ ಸೀಮಿತ ಹಾಗೂ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆಯಡಿ “ಪ್ರತಿ ತಾಲೂಕಿನಿಂದ ಕೇವಲ 10 ಅಭ್ಯರ್ಥಿಗಳಿಗೆ” ಮಾತ್ರ ಈ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ತರಬೇತಿಯಲ್ಲಿ ಏನೆಲ್ಲಾ ಒಳಗೊಂಡಿದೆ?
ಈ ಹೈಟೆಕ್ ಕಾರ್ಯಕ್ರಮದಲ್ಲಿ ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಕ್ರಾಂತಿ ಸೃಷ್ಟಿಸುತ್ತಿರುವ ಮತ್ತು ಭಾರಿ ಬೇಡಿಕೆಯಿರುವ ಸುಧಾರಿತ AI ತಂತ್ರಜ್ಞಾನಗಳನ್ನು ಪ್ರಾಕ್ಟಿಕಲ್ಆಗಿ ಕಲಿಸಲಾಗುತ್ತದೆ.
ಪ್ರಾಂಪ್ಟ್ ಇಂಜಿನಿಯರಿಂಗ್, ಕಸ್ಟಮ್ AI ಡೇಟಾ ಸಿಸ್ಟಮ್ ರೂಪಿಸಲು RAG Applications, ಅತ್ಯಾಧುನಿಕ AI ರೋಬೋಟ್‌ಗಳು/ಏಜೆಂಟ್‌ಗಳ ಅಭಿವೃದ್ಧಿಗಾಗಿ ಏಜೆಂಟಿಕ್ ಎಐ. ಯಾವುದೇ ಕೋಡಿಂಗ್ ಜ್ಞಾನ ಇಲ್ಲದೆ ಜಗತ್ತಿನ ಅತ್ಯಾಧುನಿಕ ಹಾಗೂ ಹೈ-ಡಿಮಾಂಡ್ AI ಬಳಕೆಗಾಗಿ ಕ್ಲೋಡ್ (Claude), ಚಾಟ್‌ಜಿಪಿಟಿ (ChatGPT), ಗೂಗಲ್ ನಂತಹ 10 ಸಮಗ್ರ ಅಪ್ಲಿಕೇಶನ್‌ಗಳ ತರಬೇತಿಯ ಜೊತೆಗೆ, 5 ವರ್ಷದ ಅನುಭವಕ್ಕೆ ಸಮನಾದ 7 ಕ್ಯಾಪ್ಸ್ಟೋನ್ ಪ್ರಾಜೆಕ್ಟ್ ಗಳು ಈ ತರಬೇತಿಗೆ ಅತಿ ಹೆಚ್ಚಿನ ಬೇಡಿಕೆಯನ್ನು ತಂದಿರಿಸಿವೆ.
ಅಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ಉಚಿತ ಟ್ಯಾಲೆಂಟ್ ಪೋರ್ಟಲ್ ಮೂಲಕ ಉದ್ಯೋಗ ಮತ್ತು ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು.
ಯಾರೆಲ್ಲಾ ಭಾಗವಹಿಸಬಹುದು ಮತ್ತು ಏನೆಲ್ಲಾ ಸೌಲಭ್ಯಗಳಿವೆ?
ಈ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು PUC, ಡಿಪ್ಲೊಮಾ, ಪದವಿ(ಎಲ್ಲಾ ಪದವೀಧರರು), ಇಂಜಿನಿಯರಿಂಗ್ ಸೇರಿದಂತೆ ಪ್ರಸ್ತುತ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳೂ ಅರ್ಜಿಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಗಳೂರಿನ ಪಿಲಿಕುಳದ ತರಬೇತಿ ಕೇಂದ್ರದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಜೊತೆಗೆ AI ಲ್ಯಾಪ್‌ಟಾಪ್ ಸೌಲಭ್ಯ ವನ್ನು ನೀಡಲಾಗುತ್ತದೆ.
ತರಬೇತಿಯ ನಂತರ ಅಭ್ಯರ್ಥಿಗಳಿಗೆ ಅತ್ಯಂತ ಮೌಲ್ಯಯುತವಾದ 'Government AI Professional Certificate' ವಿತರಿಸಲಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಪ್ಲೇಸ್‌ಮೆಂಟ್ ನೆರವು ನೀಡಲಾಗುವುದಲ್ಲದೆ, ಸ್ವಂತ ಬಿಸಿನೆಸ್ ಅಥವಾ ಸ್ಟಾರ್ಟ್‌ಅಪ್ ಆರಂಭಿಸಲು ಆಸಕ್ತಿ ಇರುವವರಿಗೆ ಉದ್ಯಮದ ತಜ್ಞರಿಂದ ಮೆಂಟರ್‌ಶಿಪ್, ಬ್ಯಾಂಕ್ ಫಂಡಿಂಗ್ ಮತ್ತು ಸರ್ಕಾರದ ಸೀಡ್ ಫಂಡಿಂಗ್ ಪಡೆಯಲು ಅವಕಾಶವಿದೆ. ತಾಲೂಕು ಮಟ್ಟದ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೂ ಜಾಗತಿಕ ಮಟ್ಟದ AI ಅವಕಾಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಇದೊಂದು ಅತ್ಯಪೂರ್ವ ವೇದಿಕೆಯಾಗಿದೆ.
ಯಾಕೆ ಈ ತರಬೇತಿಗೆ ಅತ್ಯಂತ ಬೇಡಿಕೆ?
ಇಂದಿನ ಮಾರುಕಟ್ಟೆಯಲ್ಲಿ ಈ ತರಬೇತಿಯು ಇಷ್ಟೊಂದು ದೊಡ್ಡ ಸಂಚಲನ ಮೂಡಿಸಲು ಕಾರಣ, ಇದರ ವ್ಯಾಪ್ತಿ ಮತ್ತು ಬಹುಮುಖಿ ಉದ್ಯೋಗ ಹಾಗೂ ಉದ್ಯಮ ಅವಕಾಶಗಳು. ಈ ಸುಧಾರಿತ AI ತರಬೇತಿಯು ಕೇವಲ ಸಾಫ್ಟ್‌ವೇರ್ ಅಥವಾ ಕಂಪ್ಯೂಟರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಪ್ರಸ್ತುತ ಮಾರುಕಟ್ಟೆಯ ಬಿಸಿನೆಸ್, ಮಾರ್ಕೆಟಿಂಗ್, ಅಕೌಂಟ್ಸ್, ಹೆಚ್.ಆರ್ (HR), ಶಿಕ್ಷಣ, ಮಾಧ್ಯಮ, ಕೃಷಿ, ಕಾನೂನು ಮತ್ತು ವಿನ್ಯಾಸ (Design) ಸೇರಿದಂತೆ ಬರೋಬ್ಬರಿ 84ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಆಧುನಿಕ ಉದ್ಯೋಗಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಲು ಅಥವಾ ಸ್ವಂತ ಯಶಸ್ವಿ ಉದ್ಯಮವನ್ನು ಸ್ಥಾಪಿಸಲು ಸಂಪೂರ್ಣವಾಗಿ ಸಹಾಯ ಮಾಡುತ್ತದೆ.
ಸೀಟುಗಳ ಹಂಚಿಕೆ ಹೇಗೆ?
ರಾಜ್ಯಾದ್ಯಂತ ತಾಲೂಕು ಮಟ್ಟದ ಯುವಕ-ಯುವತಿಯರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ, ಪ್ರತಿ ತಾಲೂಕಿಗೆ ಲಭ್ಯವಿರುವ 10 ಸೀಟುಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ (50%-5 ಸೀಟುಗಳು):
ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಅಥವಾ BCA ಮುಗಿಸಿ ಕೆಲಸ ಹುಡುಕುತ್ತಿರುವ ಯುವಕರಿಗೆ.
ಮಹಿಳಾ ಅಭ್ಯರ್ಥಿಗಳಿಗೆ (30% - 3 ಸೀಟುಗಳು):
ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯಲು ಬಯಸುವ ಯುವತಿಯರಿಗೆ ವಿಶೇಷ ಆದ್ಯತೆ.
ಕೆರಿಯರ್ ಅಪ್‌ಗ್ರೇಡ್‌ಗೆ (20% - 2 ಸೀಟುಗಳು):
ಈಗಾಗಲೇ ಕಡಿಮೆ ಸಂಬಳದ ಕೆಲಸದಲ್ಲಿದ್ದು, ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ.
ಹೀಗೆ ಪ್ರತಿ ತಾಲೂಕಿನಿಂದ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆಯ ಮೂಲಕ ಒಟ್ಟು 10 ಅರ್ಹ ಅಭ್ಯರ್ಥಿಗಳನ್ನು ಮಾತ್ರ ಈ ವಿಶಿಷ್ಟ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.
ಮುಂಬರುವ ದಿನಗಳಲ್ಲಿ "AI ತಿಳಿದವನು ಜಗತ್ತನ್ನು ಆಳುತ್ತಾನೆ" ಎಂಬುದು ಕಹಿ ಸತ್ಯ. ಈ ನಿಟ್ಟಿನಲ್ಲಿ, “ಪ್ರತಿ ತಾಲೂಕಿನಿಂದ 10 AI ಪ್ರೊಫೆಷನಲ್ಸ್” ಸೃಷ್ಟಿಸುವ ಈ ಕಲ್ಪನೆ ರಾಜ್ಯದ ಯುವಕರ ಭವಿಷ್ಯಕ್ಕೆ ಹೊಸ ದಾರಿದೀಪವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಅಪರೂಪದ ಹೈಟೆಕ್ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೆಳಗಿನ ಅಧಿಕೃತ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬಹುದು: https://www.sunailabs.com/kpt-govt-polytechnic ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9141160295