ಅಧ್ಯಯನಶೀಲತೆ ಗಾಂಧಿ ಆದರ್ಶ: ಪ್ರಸಾದ್ ರಕ್ಷಿದಿ
‘ಲೋಕ ಗೆಂದಿನ ಗಾಂಧಿಯೆರ್’ ದ್ವಿತೀಯ ಮುದ್ರಣ ಬಿಡುಗಡೆ
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಜಂಟಿಯಾಗಿ ಬಾವುಟ ಗುಡ್ಡೆಯ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಎರಡನೇಯ ಮುದ್ರಣದ ಕೃತಿ ಬಿಡುಗಡೆ ಹಾಗೂ ‘ಮಹಾತ್ಮರ ಮನನ’ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಉದಯ ಕುಮಾರ್ ಇರ್ವತ್ತೂರು ಅವರು ಬರೆದ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಪುನರ್ ಮುದ್ರಣದ ಕೃತಿಯನ್ನು ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಬಿಡುಗಡೆಗೊಳಿಸಿದರು.
ಗಾಂಧಿ ಚಿಂತನಾ ಸಂವಾದ ಕಾರ್ಯಕ್ರಮವನ್ನು ಲೇಖಕ ಅರವಿಂದ ಚೊಕ್ಕಾಡಿ ಅವರು ನಡೆಸಿಕೊಟ್ಟರು. ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಪ್ರಭಾಕರ ಶ್ರೀಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯಿಲ್ ಎನ್. ಸ್ವಾಗತಿಸಿದರು. ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿ, ಪ್ರೇಮ್ ಕುಮಾರ್ ವಂದಿಸಿದರು.