ಜಿಟಿಟಿಸಿ ಡಿಪ್ಲೋಮಾ ಕಾಲೇಜು: ಅರ್ಜಿ ಸಲ್ಲಿಕೆಗೆ ಅವಕಾಶ

ಜಿಟಿಟಿಸಿ ಡಿಪ್ಲೋಮಾ ಕಾಲೇಜು: ಅರ್ಜಿ ಸಲ್ಲಿಕೆಗೆ ಅವಕಾಶ

ಮಂಗಳೂರು: ಬೈಕಂಪಾಡಿಯಲ್ಲಿರುವ ಸರಕಾರಿ ಜಿಟಿಟಿಸಿ ಡಿಪ್ಲೋಮಾ ಕಾಲೇಜಿನಲ್ಲಿ 2026-27ನೇ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೂ 50 ಸೀಟುಗಳು ಖಾಲಿಯಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ್ ಸಿ.ಆರ್. ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದು ಎಂಜಿನಿಯರಿಂಗ್ ಡಿಪ್ಲೋಮಾ ಆಗಿದ್ದು, ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟಲಿಜನ್ಸ್ ಅಂಡ್ ಮೆಷಿನ್ ಲರ್ನಿಂಗ್ ಕೋರ್ಸ್‌ಗಳಲ್ಲಿ ಸುಮಾರು 50ರಷ್ಟುಸೀಟುಗಳು ಖಾಲಿಯಿವೆ. ನೇರವಾಗಿ ಕಾಲೇಜಿಗೆ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಸ್ಥಳದಲ್ಲೇ ಪ್ರವೇಶಾತಿ ನೀಡಲಾಗುವುದು. ಈ ಎಲ್ಲ ಕೋರ್ಸ್‌ಗಳ ಅವಧಿ 4 ವರ್ಷಗಳಾಗಿದ್ದು, ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಅವಧಿಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು ವರ್ಷದ ಕಡ್ಡಾಯ ಇಂಟರ್ನ್ಶಿಪ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು 18,000-23,000 ಸ್ಟೈಪೆಂಡ್ ಪಡೆಯುತ್ತಾರೆ ಎಂದರು.

‘ಸರಕಾರಿ ಜಿಟಿಟಿಸಿ ಡಿಪ್ಲೋಮಾ ಕಾಲೇಜಿನಲ್ಲಿ ಶೇ. 70ರಷ್ಟುಪ್ರಾಯೋಗಿಕ ಹಾಗೂ ಶೇ. 30ರಷ್ಟುಪಠ್ಯ ಕಲಿಕೆ ಇರಲಿದೆ. ಕಳೆದ ವರ್ಷ ಶೇ 93ರಷ್ಟುದಾಖಲಾತಿ ಆಗಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆಯೂ ಇದೆ. ದೂರದ ಊರಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯೂ ಕ್ಯಾಂಪಸ್ ಒಳಗೆ ಇದೆ. ಸದ್ಯ ಬೈಕಂಪಾಡಿಯ ಎರಡು ಎಕರೆ ಪ್ರದೇಶದಲ್ಲಿ ಕಾಲೇಜು ಕಾರ್ಯಾಚರಿಸುತ್ತಿದ್ದು, ಮುಂದೆ ಮುಡಿಪುವಿನಲ್ಲಿ 10 ಎಕರೆ ಪ್ರದೇಶದಲ್ಲಿ ಕಾಲೇಜು ವಿಸ್ತರಣೆಗೆ ಚರ್ಚೆ ನಡೆದಿದೆ’.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರಕಾರದಿಂದ ಸ್ಕಾಲರ್‌ಶಿಪ್ ಕೂಡಾ ಸಿಗಲಿದೆ. ಈ ಕೋರ್ಸ್ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಉದ್ಯೋಗ ಖಚಿತವಾಗಿದ್ದು, ಈಗಾಗಲೇ ಹಲವರು

ವಿದೇಶದಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಇಷ್ಟುಮಾತ್ರವಲ್ಲದೆ ತಮ್ಮದೇ ಕಂಪನಿ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.0824-2408003ಗೆ ಸಂಪರ್ಕಿಸಬಹುದು ಎಂದರು.

ಉಪನ್ಯಾಸಕ ಗೌತಮ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article