ಡಾ. ಸರಸ್ವತಿ ಎಸ್. ರಾವ್ ಅವರಿಗೆ ನುಡಿನಮನ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಡಾ. ವಿಶಾಲ, ಡಾ. ಸುಶೀಲಾ ರಾವ್, ಪ್ರದೀಪ ಪೈ, ಡಾ. ಪಾರ್ವತಿ ಜಿ. ಐತಾಳ್, ಮಗಳು ದೀಪ್ತಿ ರಾಹುಲ್ ಸರಸ್ವತಿಯವರ ಸೌಮ್ಯ ಸ್ವಭಾವ, ನಗುಮುಖ, ಕಾಲೇಜಿನ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದ ಅವರ ಬೋಧನಾ ವೈಖರಿ, ಸಾಂಸಾರಿಕ ಜವಾಬ್ದಾರಿಗಳನ್ನು ಉದ್ಯೋಗವನ್ನೂ ಸರಿದೂಗಿಸಿಕೊಂಡು ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದ ಅವರ ಕಾರ್ಯಕ್ಷಮತೆ, ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸುವುದರ ಜತೆಗೆ ನಮ್ಮ ಹೆಮ್ಮೆಯ ಭಾರತೀಯ ವಿಜ್ಞಾನಿಗಳು, ನ್ಯಾನೋ ತಂತ್ರಜ್ಞಾನ, ವಿಷ್ಣು ಸಹಸ್ರಮಾನದ ಶ್ಲೋಕಗಳ ವ್ಯಾಖ್ಯಾನ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ ಅವರ ಬರವಣಿಗೆಯ ಪ್ರತಿಭೆಗಳ ಬಗ್ಗೆ ಮಾತನಾಡಿದರು.
ದೀಪ್ತಿ ಎಸ್. ರಾವ್ ಪ್ರಾರ್ಥನೆ ಹಾಡಿದರು. ಡಾ. ಮಾಧವ ಎಂ.ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದೇಹಾನ್ತೇ ತವ ಸಾಯುಜ್ಯಂ...
ಸರಸ್ವತಿ ಎಸ್. ರಾವ್ ಅವರು ಅನಾಯಾಸೇನ ಮರಣಂ ಎಂಬ ವಿಷಯದಲ್ಲಿ ಸ್ವಲ್ಪ ಮಟ್ಟಿನ ಸೋಲುಂಡರೂ ಶ್ಲೋಕದ ಅನಂತರದ ವಾಕ್ಯಗಳ ಸಾರ್ಥಕತೆಯನ್ನು ಸಾಧಿಸಿ ಸಾಯುಜ್ಯ ಪಡೆಯುವುದರಲ್ಲಿ ಅನುಮಾನವಿಲ್ಲ. ಅವರ ಸಾಧನಾಯುಕ್ತ ಮತ್ತು ಅನುಕರಣೀಯ ಬದುಕಿನ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ. -ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾ.ಸ್ವ. ಸಂಘ

