ಅಂತರ್ ವಿದ್ಯುತ್ ಕಂಪನಿಗಳ ರಾಜ್ಯ ಮಟ್ಟದ ಕ್ರೀಡಾಕೂಟ

ಅಂತರ್ ವಿದ್ಯುತ್ ಕಂಪನಿಗಳ ರಾಜ್ಯ ಮಟ್ಟದ ಕ್ರೀಡಾಕೂಟ


ಮಂಗಳೂರು: ಅಂತರ್ ವಿದ್ಯುತ್ ಕಂಪನಿಗಳ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್, ಪವರ್ ಲಿಪ್ಟಿಂಗ್, ಖೋ-ಖೋ ಮತ್ತು ಈಜು ಕ್ರೀಡೆಗಳ ಎರಡು ದಿನಗಳ ಕ್ರೀಡಾಕೂಟವು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ( ಕೆಪಿಟಿಸಿಎಲ್) ಹಾಗೂ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಸಹಯೋಗದಲ್ಲಿ ಸುರತ್ಕಲ್ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡಿತು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯ ಕುಮಾರ್ ಆರ್. ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ, ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ಯಶಸ್ಸು ಸಾಧ್ಯ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಇದ್ದದ್ದೆ. ಸೋತಾಗ ಕುಗ್ಗದೆ ಪಡೆದ ಅನುಭವವನ್ನು ಗೆಲುವಿಗೆ ಸೋಪಾನವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದ ಅವರು ಈ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಮೆಸ್ಕಾಂಗೆ ಲಭಿಸಿದ್ದು, ಅತೀವ ಸಂತಸ ತಂದಿದೆ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಮೆಸ್ಕಾಂ ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್ ವಿ. ಅವರು ಶುಭ ಹಾರೈಸಿದರು. ಮುಖ್ಯ ಇಂಜಿನಿಯರ್(ವಿದ್ಯುತ್), ಮೆಸ್ಕಾಂ, ಮಂಗಳೂರು ವಲಯ ಹಾಗೂ ಮೆಸ್ಕಾಂ ಕ್ರೀಡಾ ಸಮಿತಿ ಅಧ್ಯಕ್ಷ ರವಿಕಾಂತ್ ಆರ್. ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು. 

ಅತಿಥಿಗಳಾಗಿ ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಆರ್ಥಿಕ ಸಲಹೆಗಾರ ದೇವರಾಜ್ ಎಂ., ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಗಿರೀಶ್ ಕುಮಾರ್, ಕವಿಪ್ರನಿನಿ ನೌಕರರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಕವಿಪ್ರನಿನಿ ಹಾಗೂ ಎಲ್ಲಾ ಎಸ್ಕಾಂಗಳು ಕೆ. ಬಲರಾಂ, ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ನಿಯಂತ್ರಣಾಧಿಕಾರಿ ಉಮೇಶ್, ಅಧೀಕ್ಷಕ ಇಂಜಿನಿಯರ್ ಕವಿಪ್ರನಿನಿ ಚೈತನ್ಯ, ಕವಿಪ್ರನಿನಿ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಎಸ್. ಗಿರೀಶ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ಡಿಪ್ಲೊಮಾ ಇಂಜಿನಿಯರ್ ಸಂಘದ ನಿತೀಶ್ ಹೆಚ್. ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ರಾಜ್ಯದ ಐದು ಎಸ್ಕಾಂಗಳ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. 

ಶಾಂತಾನಂದ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ವಂದಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article