ಇಬ್ಬರು ಬಾಲಕಿಯರು ನಾಪತ್ತೆ

ಇಬ್ಬರು ಬಾಲಕಿಯರು ನಾಪತ್ತೆ


ಮಂಜೇಶ್ವರ: ವರ್ಕಾಡಿ ನೀರೊಳಿಗೆಯಲ್ಲಿನ ಶ್ರೀಮಾತಾ ಬಾಲಿಕಾಶ್ರಮ ಟ್ರಸ್ಟ್‌ನ ಹಾಸ್ಟೆಲ್‌ನಿಂದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ. 

ಉರ್ಡೂರು ಮಣಿಯೂರಿನ ಅಮೃತಾ (15) ಮತ್ತು ಕಾಸರಗೋಡು ಕೇಳುಗುಡ್ಡೆಯ ಕೆ.ಸಿ ಅನನ್ಯಾ (14) ನಾಪತ್ತೆಯಾದವರು. 

ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಜೆ ಏಳು ಗಂಟೆ ಬಳಿಕ ಇಬ್ಬರೂ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಬಾಲಕಿಯರ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಮಂಜೇಶ್ವರ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article