ಜೆಇಇ ಅಡ್ವಾನ್ಸ್ 2026: ಆಳ್ವಾಸ್ 17 ವಿದ್ಯಾರ್ಥಿಗಳು ಐಐಟಿಗಳಿಗೆ ಅರ್ಹತೆ

ಜೆಇಇ ಅಡ್ವಾನ್ಸ್ 2026: ಆಳ್ವಾಸ್ 17 ವಿದ್ಯಾರ್ಥಿಗಳು ಐಐಟಿಗಳಿಗೆ ಅರ್ಹತೆ


ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಟ್ಟು 17 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಮಾಡಿ ಗಮನ ಸೆಳೆದಿದ್ದಾರೆ.

ಜನರಲ್ ಹಾಗೂ ಕೆಟಗರಿ ವಿಭಾಗದ ಅಖಿಲ ಭಾರತ ಮಟ್ಟದಲ್ಲಿ ಸ್ವಾತಿ ತಲವಾರ್ 1513 ರ‍್ಯಾಂಕ್, ಹರ್ಷವರ್ಧನ್ ಕೆಪಿ 1698 ರ‍್ಯಾಂಕ್, ಮೆಲ್ರೋಯ್ ಕ್ಯಾಸ್ಟಲಿನೋ 1733 ರ‍್ಯಾಂಕ್ ಮತ್ತು ಕೃತಿಕ್ ಬಿ 1795 ರ‍್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಉಳಿದಂತೆ ನೀಲಾಂಬಿಕ 2223 ರ‍್ಯಾಂಕ್, ಮಾನಸ ಕೆ.ಎಸ್ 2935 ರ‍್ಯಾಂಕ್, ಪಿಯೂಷ್ ಎಚ್ 3131 ರ‍್ಯಾಂಕ್, ಸುಪ್ರಜ್  ಶೆಟ್ಟಿ 3216 ರ‍್ಯಾಂಕ್ ಹಾಗೂ ಪ್ರಥಮ್ 3523 ರ‍್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಇವರೊಂದಿಗೆ ಹರ್ಷಿತಾ ಬಂಡಿಗೇರಿ 4119 ರ‍್ಯಾಂಕ್, ಪ್ರಣವ್ 4580 ರ‍್ಯಾಂಕ್, ವಿಜಯ್ ಕುಮಾರ್ 5134 ರ‍್ಯಾಂಕ್, ಹರ್ಷಿತಾ ಎನ್ ಆರ್ 5191 ರ‍್ಯಾಂಕ್, ರಾಹುಲ್ 5512 ರ‍್ಯಾಂಕ್, ಶರತ್ಚಂದ್ರ 6457 ರ‍್ಯಾಂಕ್, ಶಶಾಂಕ್ 6392 ರ‍್ಯಾಂಕ್ ಮತ್ತು ಈಶಾನ್ 25722 ರ‍್ಯಾಂಕ್ ಗಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಜೆಇಇ ಮೇನ್ಸ್ ಹಾಗೂ ಅಡ್ವಾನ್ಸ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಆಳ್ವಾಸ್ ಪದವಿಪೂರ್ವ ಕಾಲೇಜು ಅನುಭವಿ ಬೋಧಕರ ಮಾರ್ಗದರ್ಶನ, ನಿಯಮಿತ ಪರೀಕ್ಷೆಗಳು, ವೈಯಕ್ತಿಕ ಶೈಕ್ಷಣಿಕ ಸಲಹೆ ಹಾಗೂ ಸ್ಪರ್ಧಾತ್ಮಕ ತರಬೇತಿಯನ್ನು ಒದಗಿಸುತ್ತಿದೆ. ಇದರ ಫಲವಾಗಿ ಪ್ರತಿವರ್ಷ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. 

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article