ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಸಂಸ್ಕೃತಿ ಸಂಭ್ರಮ-2026’ ಉದ್ಘಾಟನೆ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಸಂಸ್ಕೃತಿ ಸಂಭ್ರಮ-2026’ ಉದ್ಘಾಟನೆ


ಮೂಡುಬಿದಿರೆ: ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ಉತ್ತಮ ಪರಿಸರ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಯಕ್ಷಗಾನ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಅವರು ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ‘ಎಕ್ಸಲೆಂಟ್ ಸಂಸ್ಕೃತಿ ಸಂಭ್ರಮ-2026’ ಪ್ರತಿಭೋತ್ಸವದ ಅಂಗವಾಗಿ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾಯ೯ಕ್ರಮವನ್ನು ಸಾಂಸ್ಕೃತಿಕ ತೇರನ್ನು ಎಳೆಯುವ ಮೂಲಕ  ಚಾಲನೆ ನೀಡಿ ಮಾತನಾಡಿದರು. 

ಜೀವನವನ್ನು ಸಮಾಜಸೇವೆಗೆ ಮೀಸಲಿಟ್ಟು, ತಂದೆ-ತಾಯಿ ಹಾಗೂ ಗುರುಗಳಿಗೆ ಸದಾ ಋಣಿಯಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಯಕ್ಷಗಾನವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರ ಕೊಡುಗೆ ಗಮನಾರ್ಹವಾಗಿದೆ. ಕಲೆ ಸಮಾಜವನ್ನು ಜಾಗೃತಗೊಳಿಸುವ ಶಕ್ತಿಯಾಗಿದ್ದು, ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಬಳಿಕ ‘ಯಕ್ಷಗಾನಂ ವಿಶ್ವಗಾನಂ’ ಘೋಷಣೆಯೊಂದಿಗೆ ಗಾನಸುಧೆ ಹರಿಸಿದರು. ಇದೇ ವೇಳೆ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಯಕ್ಷಗಾನ ಕಲಾವಿದ ಮಹವೀರ ಪಾಂಡಿ, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿದರು.

ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಜೈನ್, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಇ ಪ್ರಾಂಶುಪಾಲ ಶ್ರೀಪ್ರಸಾದ್, ಕೀಬೋರ್ಡ್ ಪರಿಣಿತ ಸದಾಶಿವ ಭಟ್ ಶಿವಗಿರಿ, ತಬಲಾ ಪರಿಣಿತ ಗೌರಿಪ್ರಸಾದ್ ಗುರುವಾಯನಕೆರೆ, ಭರತನಾಟ್ಯ ಕಲಾವಿದೆ ರಶ್ಮಿತಾ ಅರವಿಂದ್, ಕರಾಟೆ ತರಬೇತುದಾರ ಸರ್ಫರಾಜ್ ಎ.ಕೆ., ಚಿತ್ರಕಲೆ ಶಿಕ್ಷಕ ಭಾಸ್ಕರ ನೆಲ್ಯಾಡಿ, ಕೊಳಲು ವಾದಕ ಲೋಕೇಶ್ ಸಂಪಿಗೆ, ಚೆಂಡೆ ವಾದಕ ಚಂದ್ರಶೇಖರ ಆಚಾರ್ ಹಾಗೂ ಪಾಶ್ಚಾತ್ಯ ನೃತ್ಯ ತರಬೇತುದಾರ ರೂಪೇಶ್ ಕುಮಾರ್, ಕರಕುಶಲ ಕಲೆ ಶಿಕ್ಷಕಿ ಚೇತನಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಹರ್ಷಿತಾ ಸ್ವಾಗತಿಸಿದರು. ಮೌಲ್ಯ ವೈ.ಆರ್. ಜೈನ್ ಅತಿಥಿ ಪರಿಚಯ ಮಾಡಿಕೊಟ್ಟರು. ವಿಜೇತ ಹಾಗೂ ಶರ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವನಿತಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article