ಸಾಯಿ ಮಾನಾ೯ಡ್ ಸೇವಾ ಸಂಘದಿಂದ 4 ಶಾಲೆಯ ವಿದ್ಯಾಥಿ೯ಗಳಿಗೆ ಕೊಡೆ, ಟ್ರ್ಯಾಕ್ ಶೂಟ್ ವಿತರಣೆ
Sunday, June 14, 2026
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ(ರಿ.) ಅಮನಬೆಟ್ಟು, ಪಡುಮಾರ್ನಾಡ್ ಇದರ 96 ಸೇವಾ ಯೋಜನೆಯಂಗವಾಗಿ ಜೂನ್-ಜುಲೈ ತಿಂಗಳ ಸೇವಾ ಯೋಜನೆಯನ್ನು 4 ಶಾಲೆಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್, ಕೊಡೆ, ಸ್ವೀಟ್ ಹಾಗೂ ಶಾಲೆಗೆ ಮಿಕ್ಸಿಯನ್ನು ವಿತರಿಸಲಾಯಿತು.
ರೂ 40,000ದಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮನಬೆಟ್ಟು ಶಾಲೆಗೆ ಕೊಡೆ ಹಾಗೂ ಅಂಗನವಾಡಿ ಮಕ್ಕಳಿಗೆ ಕೊಡೆ ಮತ್ತು ಟ್ರ್ಯಾಕ್ ಸೂಟ್,ಸ್ವೀಟ್, ಬನ್ನಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಟ್ರ್ಯಾಕ್ ಸೂಟ್, ಸ್ವೀಟ್, ಕೆಲ್ಲಪುತ್ತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರ್ಯಾಕ್ ಸೂಟ್, ಸ್ವೀಟ್, ತಂಡ್ರಕೆರೆ ಹಿರಿಯ ಪ್ರಾಥಮಿಕ ಶಾಲೆಗೆ ಮಿಕ್ಸರ್ ಗ್ರೈಂಡರ್, ಸ್ವೀಟ್ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಯಿ ಮಾನಾ೯ಡ್ ಸೇವಾ ಸಂಘದ ಅಧ್ಯಕ್ಷ ಯತೀಶ್ ಅಂಚನ್, ಕೋಶಧಿಕಾರಿ ಪ್ರಜ್ವಲ್ ಪೂಜಾರಿ, ಉಪಾಧ್ಯಕ್ಷ ರೋಹಿತ್ ಅಂಚನ್, ಮಹಿಳಾ ಘಟಕದ ಜವಾಬ್ದಾರಿ ನೋಡುವ ಶಶಿಕಲಾ ಗಿರೀಶ್, ದಯಾನಂದ ಹೆಗ್ಡೆ, ಸಂತೋಷ್ ಕೋಟ್ಯಾನ್ ಹವಾಲ್ದರಬೆಟ್ಟು, ಸುರೇಂದ್ರ ಪೂಜಾರಿ ಅಡ್ಕರೆ, ಸಂತೋಷ್ ಮೊಡಂದೆಲ್, ಉಷಾ ಕಿರಣ್, ಶಿಕ್ಷಕಿ ಶಾಹಿನ್, ಸುಧಾಕರ್ ಆಚಾರ್ಯ ಬನ್ನಡ್ಕ, ಸತೀಶ್ ಬಂಗೇರ, ಅಮಿತಾ ನಾಗೇಶ್, ಸುಮಿತ್ರ ವಿಶ್ವನಾಥ್ ಬಂಗೇರಡಿ, ಅರುಣ್ ಪೂಜಾರಿ ಅಲಿಮಾರ್ ಉಪಸ್ಥಿತರಿದ್ದರು.
ಶಾಲೆಯ ಟ್ರಸ್ಟಿಗಳು, ಪ್ರಧಾನ ಪೋಷಕರು, ಶಿಕ್ಷಕರು ಈ ಸಂದಭ೯ದಲ್ಲಿದ್ದರು.


