ದಿಶಾ ಪೂಜಾರಿ, ಅಗ್ನಿವೀರ್ ವಿರಾಜ್ ಪೂಜಾರಿಗೆ ಸಂಸದರಿಂದ ಸಮ್ಮಾನ

ದಿಶಾ ಪೂಜಾರಿ, ಅಗ್ನಿವೀರ್ ವಿರಾಜ್ ಪೂಜಾರಿಗೆ ಸಂಸದರಿಂದ ಸಮ್ಮಾನ


ಮೂಡುಬಿದಿರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಯುವಜನತೆ ಶಿಕ್ಷಣ, ಕ್ರೀಡೆ ಹಾಗೂ ರಾಷ್ಟ್ರಸೇವೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ದ. ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. 


ಅವರು ಮೂಲ್ಕಿ–ಮೂಡುಬಿದಿರೆ ಮಂಡಲದ ವಿಶೇಷ ಜನಸಂಪರ್ಕ ಅಭಿಯಾನದ ಅಂಗವಾಗಿ ಆಲಃಗಾರಿನಲ್ಲಿ ನಡೆದ ಕಾಯ೯ಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಆಳ್ವಾಸ್ ನ ದಿಶಾ ಪೂಜಾರಿ ಹಾಗೂ ಅಗ್ನಿವೀರ್‌ಗೆ ಆಯ್ಕೆಯಾಗಿರುವ ಪಣಪಿಲ ಗ್ರಾಮದ ವಿರಾಜ್ ಪೂಜಾರಿ  ಸನ್ಮಾನಿಸಿ ಮಾತನಾಡಿದರು. 


ದಿಶಾ ಮತ್ತು ವಿರಾಜ್ ಅವರ ಸಾಧನೆ ಇತರ ಯುವಕರಿಗೆ ಪ್ರೇರಣೆಯಾಗಿದ್ದು, ಇಂತಹ ಪ್ರತಿಭೆಗಳನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾಧಕರ ಯಶಸ್ಸಿನ ಹಿಂದೆ ಕುಟುಂಬದವರು ಹಾಗೂ ಶಿಕ್ಷಕರ ಶ್ರಮವೂ ಅಡಗಿದ್ದು, ಯುವಕರು ತಮ್ಮ ಗುರಿಯತ್ತ ನಿರಂತರ ಪ್ರಯತ್ನ ಮಾಡಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸುನೀಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಮೂಲ್ಕಿ–ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ ಮತ್ತು ಹರಿಪ್ರಸಾದ್, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲ್, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಯುವ ಮೋಚಾ೯ದ ಕಾಯ೯ದಶಿ೯ ಭರತ್ ಶೆಟ್ಟಿ, ಪ್ರಮುಖರಾದ ಕೆ.ಆರ್. ಪಂಡಿತ್, ಎಂ.ಎಸ್. ಕೋಟ್ಯಾನ್, ಕೆ. ಕೃಷ್ಣರಾಜ ಹೆಗ್ಡೆ,  ಈಶ್ವರ್ ಕಟೀಲ್, ಮೇಘನಾಥ ಶೆಟ್ಟಿ, ಸುಕೇಶ್ ಶೆಟ್ಟಿ ಎದಮಾರು, ಅಶ್ವತ್ಥ್ ಪಣಪಿಲ, ದೀಕ್ಷಿತ್ ಪಣಪಿಲ, ಸಚಿನ್ ಪಣಪಿಲ,   ಜೋಯ್ಲಸ್ ಡಿ'ಸೋಜಾ ತಾಕೊಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

'ಮಾ ಕೆ ನಾಮ್ ಏಕ್ ಪೇಡ್' ಎಂಬ ಕೇಂದ್ರ ಸರಕಾರದ ಯೋಜನೆಯಂಗವಾಗಿ ಆಲಂಗಾರು ದೇವಸ್ಥಾನದ ಆವರಣದಲ್ಲಿ ಸಂಸದ ಬ್ರಿಜೇಶ್ ಚೌಟ ಅವರು ಗಿಡವನ್ನು ನೆಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article