ಸುದೀಪ್ ಎನ್.ಎಸ್.ಗೆ ಪಿ.ಎಚ್.ಡಿ ಪದವಿ
Monday, June 22, 2026
ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಸುದೀಪ್ ಎನ್.ಎಸ್. ಅವರು ಯಾಂತ್ರಿಕ ಅಭಿಯಾಂತ್ರಿಕ ವಿಭಾಗದಲ್ಲಿ ಮಂಡಿಸಿದ ‘ಆಹಾರ ತ್ಯಾಜ್ಯದಿಂದ ಉತ್ಪಾದಿತ ಬಯೋಗ್ಯಾಸ್ ಬಳಸಿ ಟ್ಯೂಬುಲರ್ ರಿಯಾಕ್ಟರ್ ಮೂಲಕ ಜಲಜನಕ ಉತ್ಪಾದನೆ ಮತ್ತು ಮೌಲ್ಯಮಾಪನ’ ಎಂಬ ಮಹಾ ಪ್ರಬಂಧಕ್ಕೆ ಜೂ.೧೮ ರಂದು ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗಿದೆ.
ಇವರಿಗೆ ಸಹ ಪ್ರಾಧ್ಯಾಪಕ ಡಾ. ವಾಸುದೇವ ಮಾಧವ ಅವರ ಮಾರ್ಗದರ್ಶನದಲ್ಲಿ ಮಂಡನೆ ಮಾಡಿದ್ದಾರೆ.
ಇವರು ಮೈಸೂರು ನಿವಾಸಿ ನೂರಂಬಾಡ ಶಿವಸುಬ್ರಹ್ಮಣ್ಯ ಹಾಗೂ ದೀಪಾ ಸುಬ್ರಹ್ಮಣ್ಯ ಅವರ ಪುತ್ರ.
ಇವರ ಸಂಶೋಧನೆಯು ದಿನನಿತ್ಯದ ಆಹಾರ ತ್ಯಾಜ್ಯದಿಂದ ಜಲಜನಕ ತಯಾರಿಸುವ ಕುರಿತಾಗಿದೆ. ಈ ಅನಿಲವು ಮುಂದಿನ ಪೀಳಿಗೆಯ ಆಟೋಮೊಬೈಲ್‌ಗಳಿಗೆ ಪ್ರಮುಖ ಇಂಧನಗಳಲ್ಲಿ ಒಂದೆನಿಸಿದೆ.