ವೈದ್ಯರ ಕೊರತೆಯಲ್ಲಿರುವ ಶಿತಾ೯ಡಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ: ಬೆಳುವಾಯಿ, ವೇಣೂರಿನ ವೈದರು ಸೇವೆ ನೀಡುವಂತೆ ಸೂಚನೆ
ಇಂದು (ಸೋಮವಾರ) ಆರೋಗ್ಯ ಸಚಿವರು ಕಾಶಿಪಟ್ಣಕ್ಕೆ ಭೇಟಿ ನೀಡುವುದನ್ನು ತಿಳಿದ ಶಿರ್ತಾಡಿಯ ಆಪತ್ಬಾಂಧವ ಸೂರಜ್ ಜೈನ್ ಹಾಗೂ ಜಯಶ್ರೀ ಹೋಟೆಲ್ ಮಾಲಕ ಸುರೇಶ್ ಅಂಚನ್ ಅವರು ಶಿರ್ತಾಡಿಯ ಸಾರ್ವಜನಿಕರ ಸಹಿ ಸಂಗ್ರಹಿಸಿ ಖಾದರ್ ಅವರಿಗೆ ಮನವಿ ಸಲ್ಲಿಸಿ ಆಸ್ಪತ್ರೆಗೊಮ್ಮೆ ಭೇಟಿ ನೀಡುವಂತೆ ಆಗ್ರಹಿಸಿದ್ದರು.
ಅವರ ಮನವಿಗೆ ಸ್ಪಂದಿಸಿದ ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳಲ್ಲಿ ಅಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದರು.
ಆಸ್ಪತ್ರೆಯ ಸಿಬ್ಬಂದಿಗಳ ಕಡತ, ಕೊಠಡಿಗಳು, ಔಷಧಿಗಳನ್ನು,ಯಂತ್ರಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಕೆಲ ಸಿಬ್ಬಂದಿಗಳು ತಿಂಗಳಿಗೆರಡು ದಿನ ಬಂದು ಸಹಿ ಹಾಕಿ ಹೋಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈಬಗ್ಗೆ ಟಿ.ಎಚ್.ಒ.ಅವರನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ದಿನಗಳಲ್ಲಿ ಪೂರ್ಣಕಾಲಿಕ ವೈದ್ಯರ ನೇಮಕಾತಿಯ ಬಗ್ಗೆ ಭರವಸೆ ನೀಡಿದ ಅವರು ಡಿ.ದರ್ಜೆಯ ಸಿಬ್ಬಂದಿಗಳ ವೇತನವನ್ನು ಶೀಘ್ರದಿಂದಲೇ ಹೆಚ್ಚಳಗೊಳಿಸಲಾಗುವುದೆಂದು ಹೇಳಿದರು.
ಸುರೇಶ್ ಅಂಚನ್, ಸೂರಜ್ ಜೈನ್, ಸತೀಶ್ ಕಾಶಿಪಟ್ಣ, ವಿವಿಯನ್ ಪಿಂಟೊ, ಹಸೀನಾ ಖಾನ್,ಯಶೋಧರ ಪೂಜಾರಿ, ಸತೀಶ್ ಪೂಜಾರಿ, ಶರೀಫ್ ಎಂ.ಎಂ, ಇಕ್ಬಾಲ್ ವಾಲ್ಪಾಡಿ, ಶಿರ್ತಾಡಿಯ ರಿಕ್ಷಾ ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

